ಕೌಲಾಲಂಪುರ: ಪಿ.ವಿ. ಸಿಂಧು ಮಲೇಷ್ಯಾ ಮಾಸ್ಟರ್ ಸೂಪರ್-500 ಬ್ಯಾಡ್ಮಿಂಟನ್ ಪಂದ್ಯಾವಳಿಯ ದ್ವಿತೀಯ ಸುತ್ತು ತಲುಪಿದ್ದಾರೆ. ಬುಧವಾರದ ವನಿತಾ ಸಿಂಗಲ್ಸ್ ಮುಖಾಮುಖೀಯಲ್ಲಿ ಅವರು ಸ್ಕಾಟ್ಲೆಂಡ್ನ 22ನೇ ರ್ಯಾಂಕಿಂಗ್ ಆಟಗಾರ್ತಿ ಕಸ್ಟ್ಸಿ ಗಿಲ್ಮೋರ್ ವಿರುದ್ಧ 21-17, 21-16 ಅಂತರದ ಜಯ ಸಾಧಿಸಿದರು.
ವನಿತಾ ಸಿಂಗಲ್ಸ್ನಲ್ಲಿ ಅಶ್ಮಿತಾ ಚಾಲಿಹಾ ಮತ್ತು ಪುರುಷರ ಸಿಂಗಲ್ಸ್ನಲ್ಲಿ ಕಿರಣ್ ಜಾರ್ಜ್ ಕೂಡ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.ದಂಪತಿಗೆ ಗೆಲುವು: ಮಿಶ್ರ ಡಬಲ್ಸ್ ನಲ್ಲಿ ಬಿ. ಸುಮೀತ್ ರೆಡ್ಡಿ-ಎನ್. ಸಿಕ್ಕಿ ರೆಡ್ಡಿ ಕೂಡ ದ್ವಿತೀಯ ಸುತ್ತಿ ಗೇರಿದ್ದಾರೆ.
ಇವರು ಹಾಂಕಾಂಗ್ನ ಲ್ಯು ಚುನ್ ವೈ-ಫ-ಚಿ ಯಾನ್ ವಿರುದ್ಧ 21-15, 12-21, 21-17ರಿಂದ ಗೆದ್ದು ಬಂದರು. ಗಂಡ-ಹೆಂಡತಿ ಜೋಡಿಯಿನ್ನು ಅಗ್ರ ಶ್ರೇಯಾಂಕದ ಮಲೇಷ್ಯನ್ ಆಟಗಾರರಾದ ಚೆನ್ ಟಾಂಗ್ ಜೀ-ತೋಹ್ ಈ ವೀ ಸವಾಲು ಎದುರಿಸಬೇಕಿದೆ.