ಬೆಂಗಳೂರು: ಪಿವಿಐ ಎಂದು ಪ್ರೀತಿಯಿಂದ ಕರೆಯಲ್ಪಡುವ ಪ್ರಾಕ್ರಮಿಕಾ ವೃತ್ತಿಪರ ಸಂಸ್ಥೆಯು, ಯಲಹಂಕದ ಉತ್ತರ ಬೆಂಗಳೂರಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ಬ್ಯಾಚ್ಗಾಗಿ ತನ್ನ ಮೂರನೇ ಘಟಿಕೋತ್ಸವವನ್ನು ಆಯೋಜಿಸಿತ್ತು. ಈ ಅಪೂರ್ವ ಮುಂಜಾನೆ ಘನತೆ, ಫಲಿತಾಂಶ ಮತ್ತು ನೈಜ ಜಗತ್ತಿನ ಸರ್ವಸನ್ನದ್ಧತೆಯನ್ನು ಬಿಂಬಿಸುವ ಕಲಿಕಾರ್ಥಿಗಳು, ಕುಟುಂಬಗಳು, ಶಿಕ್ಷಣತಜ್ಞರು, ಉದ್ಯೋಗಿಗಳು ಮತ್ತು ಸಮುದಾಯ ಪಾಲುದಾರರನ್ನು ಒಂದೆಡೆ ಸೇರಿಸಿತು.
ಒಂದು ವರ್ಷ ಮತ್ತು ಎರಡು ವರ್ಷಗಳ ಕಲಿಕೆ ಮತ್ತು ವೈಯಕ್ತಿಕ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಕಲಿಕಾರ್ಥಿಗಳಿಗೆ ಔಪಚಾರಿಕ ಪದವಿ ಪ್ರದಾನ ಸಮಾರಂಭ, ವಿಶೇಷ ಅತಿಥಿಗಳ ಸ್ಪೂರ್ತಿದಾಯಕ ಭಾಷಣಗಳು ಮತ್ತು ಪಿವಿಐನ ಸೇರ್ಪಡೆಗಾಗಿ ಪ್ರತಿಜ್ಞೆಯ ಮೂಲಕ ಸಾಮೂಹಿಕ ಕ್ರಮಕ್ಕಾಗಿ ಬಲವಾದ ಸಂದೇಶ ಕಾರ್ಯಕ್ರಮದ ವಿಶೇಷವಾಗಿತ್ತು.
“ಮೆಗಾ ಕನಸಿನ ಯೋಜನೆ”ಯಾಗಿ ಪ್ರಸ್ತುತಪಡಿಸಲಾದ ಮತ್ತು ವಿಶೇಷ ಶಿಕ್ಷಕರು ಮತ್ತು ಸಮಗ್ರ ತರಗತಿ ಕೊಠಡಿಗಳಿಗೆ ಪ್ರಾಯೋಗಿಕ, ರಚನಾತ್ಮಕ ಸಂಪನ್ಮೂಲವಾಗಿ ಇರಿಸಲಾಗಿರುವ “ಬಿಯಾಂಡ್ ದ ಲೇಬಲ್’ ವಿಶೇಷ ಶಾಲೆಗಳಿಗೆ ಉಲ್ಲೇಖ ಮಾರ್ಗದರ್ಶಿ” ಎಂಬ ಕಿರು ಹೊತ್ತಗೆ ಸಮಾರಂಭದ ಮತ್ತೊಂದು ಪ್ರಮುಖ ಅಂಶವಾಗಿತ್ತು. ಪಿವಿಐನ ಸಂಸ್ಥಾಪಕ ನಿರ್ದೇಶಕಿ ಡಾ. ಗಾಯತ್ರಿ ನರಸಿಂಹನ್ ಕೃತಿ ಪರಿಚಯಿಸಿದರು ಮತ್ತು ಕರ್ನಾಟಕ ಸರ್ಕಾರದ ಅಂಗವಿಕಲ ಇಲಾಖೆ ಆಯುಕ್ತ ದಾಸ್ ಸೂರ್ಯವಂಶಿ ಅವರ ಸಮ್ಮುಖದಲ್ಲಿ ಔಪಚಾರಿಕವಾಗಿ ಬಿಡುಗಡೆ ಮಾಡಲಾಯಿತು. ತಿರುವಳ್ಳೂರಿನ ಇಂದಿರಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಸ್ತುತ ಉಪ ಪ್ರಾಂಶುಪಾಲರು ಮತ್ತು ಶರೀರಶಾಸ್ತç ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿರುವ ಡಾ. ಬೃಂದಾ ವೆಂಕಟರಾಮನ್, ಯಲಹಂಕದ ಶೇಷಾದ್ರಿಪುರಂ ಪ್ರೌಢಶಾಲೆಯ ಅಧ್ಯಕ್ಷರು ಮತ್ತು ತುಮಕೂರು ಶಾಖೆಯ ಶೇಷಾದ್ರಿಪುರಂ ಕಾಲೇಜಿನ ಅಧ್ಯಕ್ಷರು
ಮತ್ತು ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್ನ ಶಾಶ್ವತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ್ ಡಬ್ಲೂ÷್ಯ.ಡಿ, ರಾಷ್ಟçಪತಿಗಳಿಂದ ನಾರಿ ಶಕ್ತಿ ಪುರಸ್ಕಾರ ಪ್ರಶಸ್ತಿ ಪುರಸ್ಕೃತೆ ಮತ್ತು ಭಾರತೀಯ ಲೇಖಕಿ, ಐಟಿ ವೃತ್ತಿಪರ ಮತ್ತು ಸ್ವಯಂಸೇವಕಿ ಪುಷ್ಪಾ ಪ್ರಿಯಾ ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿದ್ದರು.



