ದೇವನಹಳ್ಳಿ: ತಾಲ್ಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಸಾದಹಳ್ಳಿ ಗೇಟ್ ಬಳಿ.ಕ್ವಾಲಿಟಿ ಇನ್ ಬೈ ಚಾಯ್ಸ್ ಐಷಾರಾಮಿ ಹೊಟೇಲ್ನ ಉದ್ಘಾಟನೆ ಸಮಾರಂಭ ನಡೆಯಿತು. ಇನ್ನು ಈ ಉದ್ಘಾಟನೆಗೆ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ಪ್ರಿಯಾಂಕ ಉಪೇಂದ್ರ. ಮಾಜಿ ಶಾಸಕರುಗಳಾದ ಪಿಳ್ಳಮುನಿಶಾಮಪ್ಪ. ವೆಂಕಟಸ್ವಾಮಿ. ಆಗಮಿಸಿದ್ದರು.
ಚಿತ್ರನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ ಮಾತನಾಡಿ. ಕ್ವಾಲಿಟಿ ಎನ್ನುವ ಹೆಸರೇ ಚೆನ್ನಾಗಿದೆ.ಎಲ್ಲರಿಗೂ ಅಭಿನಂದಿಸುತ್ತೇನೆ. ತುಂಬ ಒಳ್ಳೆಯದಾಗಲಿ ವಿಶೇಷವಾಗಿ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ. ಎಲ್ಲರಿಗೂ ಒಳ್ಳೆಯದಾಗಲೆಂದು ಹಾರೈಸುತ್ತೇನೆ. ಎಲ್ಲರೂ ಉತ್ತಮ ಸಹಕಾರ ನೀಡುವಂತಾಗಲಿ, ಹೊಟೇಲ್ ಉದ್ದಿಮೆ ಉತ್ತಮವಾಗಿ ಬೆಳೆಯುವಂತಾಗ ಲೆಂದು ಹಾಗೂ ಕನ್ನಡ ಚಲನಚಿತ್ರ ಇಂಡಸ್ಟ್ರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು. ಮತ್ತು ಕನ್ನಡ ಚಲನಚಿತ್ರಗಳನ್ನು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿಯೇ ನೋಡಿ. ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ನಂತರ ಹೊಟೇಲ್ ಸಂಸ್ಥಾಪಕ ವಿನಯ್ ಸತ್ಯನಾರಾಯಣ್ ಮಾತನಾಡಿ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಾಗಿದ್ದು. ಜೊತೆಗೆ ನಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಸ್ಥಳೀಯವಾಗಿದ್ದು. ಬಹಳ ಶ್ರಮದಿಂದ ಸುಸ್ಸಜ್ಜಿತ ಹೊಟೇಲ್ ಉದ್ದಿಮೆಯನ್ನು ಆಯ್ಕೆ ಮಾಡಿಕೊಂಡು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸುವ ಮಹದಾಸೆಯಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಹೊಟೇಲ್ ಉದ್ದಿಮೆಯ ಜೊತೆಗೆ ಹಲವಾರು ಸಮಾಜಿಕ ಸೇವೆಯನ್ನು ಮಾಡಲಾಗುತ್ತದೆ ಎಂದು ಹಾಗೂ ಸಚಿವರಾದ ಮುರುಗೇಶ್ ನಿರಾಣಿ, ಸುರೇಶ್ ಕುಮಾರ್, ಚಿತ್ರನಟಿ ಶರಣ್ಯಶೆಟ್ಟಿ, ಅಮೃತ ಉಪ್ಪರ್, ನಿರ್ದೇಶಕ ರಾಜಕಿರನ್, ಕೀರ್ತಿಕೃಷ್ಣ, ನಿರ್ಮಾಪಕ ಎ.ಪಿ.ಕೃಷ್ಣಪ್ಪ ಅವರು ತಡವಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸುಮಾರು ಕೋಟಿರೂ.ಗಳಷ್ಟು ಬೆಲೆಬಾಳುವ ಶ್ವಾನದ ಆಗಮಿಸಿದ್ದು. ನೋಡುವವರ ಕಣ್ಣು ಬೆರಗುಗೊಳಿಸುವಂತ ಸಂದರ್ಭ ಮೂಡಿತ್ತು. ಮಾಜಿ ಶಾಸಕರುಗಳಾದ ಪಿಳ್ಳಮುನಿಶಾಮಪ್ಪ, ವೆಂಕಟಸ್ವಾಮಿ ಹಾಗೂ ಹೊಟೇಲ್ನ ಸಂಸ್ಥಾಪಕರಾದ ವಿನಯ್ ಸತ್ಯನಾರಾಯಣ್. ಹಾಗೂ ಅವರ ಕುಟುಂಬ. ಹಾಗೂ ಜಾಲಿಗೆ ಗ್ರಾಪಂ ಸದಸ್ಯರಾದ ಗೋಪಿನಾಥ್. ಮುಖಂಡರ ಹೊಟೇಲ್ ಸಿಬ್ಬಂದಿ ಇನ್ನೂ ಹಿತರರು ಹಾಜರಿದ್ದರು.
Leave a Review