ಚಳ್ಳಕೆರೆ: ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ, ಗ್ರಾಮ ಪ್ರಗತಿ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಕಾರ್ಯಕ್ರಮ ನಡೆಯಿತು.ತಾಲೂಕು ಪಂಚಾಯಿತಿ ಹಾಗೂ ನಗರಂಗೆರೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ. ಗ್ರಾಮ ಪಂಚಾಯಿತಿ ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ.
ಗಿಡಕ್ಕೆ ನೀರಿರುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಶಾಸಕ ಟಿ.ರಘುಮೂರ್ತಿ.ನಗರ ಗ್ರಾಮ ಪಂಚಾಯತಿ ಚಳ್ಳಕೆರೆ ನಗರಕ್ಕೆ ಹೊಂದಿಕೊಂಡಿದ್ದು. ಈ ಪಂಚಾಯತಿ ವ್ಯಾಪ್ತಿಗೆ ಎಷ್ಟು ಲೇಔಟ್ ಗಳು ಬರುತ್ತವೆ. ಹಾಗೂ ವಾರ್ಷಿಕ ಎಷ್ಟು ಕಂದಾಯ ಸಂದಾಯವಾಗುತ್ತದೆ ಎಂದು ಸಭೆಯಲ್ಲಿ ಪಿಡಿಓ ರಾಮಚಂದ್ರ ಅವರನ್ನು ಪ್ರಶ್ನಿಸಿದರು.
ಈ ಪ್ರಶ್ನೆಗೆ ಉತ್ತರಿಸಿದ ಪಿಡಿಓ ರಾಮಚಂದ್ರ ನಗರಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಟ್ಟು 75 ಲೇಔಟ್ ಗಳು ಬರುತ್ತವೆ. ಇದರಿಂದ ಪಂಚಾಯಿತಿಗೆ ವಾರ್ಷಿಕ 50 ಲಕ್ಷ ರೂಪಾಯಿ ಕಂದಾಯ ಬರುತ್ತದೆ.
ಈಗ 40 ಲಕ್ಷ ರೂಪಾಯಿ ಕಂದಾಯ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.ಪಿಡಿಒ ಕೊಟ್ಟ ಮಾಹಿತಿಯಿಂದ ಶಾಸಕರು ಬಾಕಿ ಉಳಿಡಿರುವ 40 ಲಕ್ಷವನ್ನು ಬಾಕಿ ಕಟ್ಟದವರಿಗೆ ನೋಟಿಸ್ ಕೊಟ್ಟು.ಬಾಕಿ ಹೊಸೂಲಿ ಮಾಡಿ ಎಂದು ಹೇಳಿದರು.
ಈ ಸಭೆಯಲ್ಲಿ ಇ.ಒ. ಶಶಿಧರ ರವರಿಗೆ ನನ್ನಿವಾಳ, ಬುಡ್ನಹಟ್ಟಿ,ಸೋಮಗುದ್ದು,ದೊಡ್ಡೇರಿ ಗ್ರಾಮ ಪಂಚಾಯಿತಿಗಳು ನಗರಕ್ಕೆ ಹತ್ತಿರದಲ್ಲಿದ್ದು. ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲೇಔಟ್ ನಿರ್ಮಾಣ ಹೆಚ್ಚಾಗಿದ್ದು. ಗ್ರಾಮ ಪಂಚಾಯತಿಗೂ ಸಹ ಹೆಚ್ಚಿನ ಕಂದಾಯ ಸಂದಾಯವಾಗುತ್ತಿದೆ. ಹೆಚ್ಚುವರಿ ಕಂದಾಯವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಬಳಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಣಾ ಧಿಕಾರಿಗಳಾದ ಶಶಿಧರ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ ಕರಿಯಣ್ಣ, ಉಪಾಧ್ಯಕ್ಷರಾದ ಓಬಣ್ಣ, ಜಿಲ್ಲಾ ಕೆ.ಡಿ.ಪಿ. ಸದಸ್ಯ ರಂಗಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ ರಾಮಚಂದ್ರಪ್ಪ, ಹಾಗೂ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.