ಗುಡಿಬಂಡೆ: ಶಿಕ್ಷಕ ಹಾಗೂ ಪರಿಸರವಾದಿ ಡಾ| ಗುಂಪು ಮರದ ಆನಂದ್ ತಮ್ಮ ಮನೆ ಚಾವಣಿಯ ಮೇಲೆ ಬಟ್ಟಲಲ್ಲಿ ನೀರು ಇಡುವ ಮೂಲಕ, ಕೋತಿಗಳಿಗೆ ಬ್ರೆಡ್ ಬನ್ ನೀಡುವುದರ ಮೂಲಕ ಪ್ರತಿಯೊಬ್ಬರ ಮನೆಯ ಚಾವಣಿಯ ಮೇಲೆ ನೀರು ಇಟ್ಟು ಪ್ರಾಣಿ ಪಕ್ಷಿಗಳ ದಾಹ ತೀರುವಂತೆ ಅರಿವು ಮೂಡಿಸಲು ಮುಂದಾಗಿದ್ದಾರೆ.
ಈ ಭಾರಿ ಎಲ್ಲೆಲ್ಲೂ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮನಷ್ಯರೇ ಈ ಬಿಸಲಿನ ಧಗೆಯನ್ನು ತಾಳಲಾರದೆ ಎಳನೀರು, ತಂಪು ಪಾನಿಯ, ಮಡಿಕೆ ನೀರು ಸೇರಿದಂತೆ ಹಲವು ವಿಧಾನಗಳನ್ನು ಹುಡುಕಿಕೊಂಡು ಬಿಸಿಲಿನ ತಾಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದು, ಆದರೆ ಮೂಕ ಪ್ರಾಣಿಗಳು ಮಾತ್ರ ಎಲ್ಲೂ ಸಹ ಕುಡಿಯಲು ನೀರು ಸಿಗದೆ, ತಿನ್ನಲು ಹಾರ ಸಿಗದೆ ಕೋತಿಗಳಂತಹ ಪ್ರಾಣಿಗಳು ಪಟ್ಟಣ, ಗ್ರಾಮಗಳಲ್ಲಿ ಮನೆಗಳಿಗೆ ನುಗುತ್ತಿದ್ದರೆ, ಇತ್ತ ಪಕ್ಷಿಗಳು, ವನ್ಯ ಜೀವಿಗಳು ಮಾತ್ರ ಕೆರೆ ಕುಂಟೆಗಳಲ್ಲಿ ನೀರಿಲ್ಲದೆ ಸಾಯುವ ಸ್ಥಿತಿಗೆ ಬಂದು ತಲುಪಿವೆ.
ಈಗಾಗಲೇ ಎಲ್ಲೆಡೆಯಲ್ಲೂ ಸಹ ಪ್ರಾಣಿ, ಪಕ್ಷಿ, ವನ್ಯಜೀವಿಗಳ ಉಳಿವಿಗಾಗಿ ಪರಿಸರ ವಾದಿಗಳು, ಯುವಕರು ಸ್ವಯಂ ಪ್ರೇರಿತವಾಗಿ ತಂಡಗಳನ್ನು ರಚನೆ ಮಾಡಿಕೊಂಡು, ಬಿಡುವಿನ ಸಮಯದಲ್ಲಿ ಕಾಡು, ಬೆಟ್ಟ, ರಸ್ತೆ ಬದಿಗಳಲ್ಲಿ ಚಿಕ್ಕ ತೊಟ್ಟಿಗಳನ್ನು ಇಟ್ಟು ಟ್ಯಾಂಕರ್ಗಳ ಸಹಾಯದಿಂದ ನೀರು ಹರಿಸುವಂತಹ ಕೆಲಸಕ್ಕೆ ಮುಂದಾಗಿದ್ದರೆ, ಇತ್ತ ಶಿಕ್ಷಕ ಹಾಗೂ ಪರಿಸರವಾದಿ ಗುಂಪು ಮರದ ಆನಂದ್ ಮಾತ್ರ ತಮ್ಮ ಮನೆಯ ಅಂಗಳದಲ್ಲೇ ಚಾವಣಿಯ ಮೇಲೆ ಬಟ್ಟಲು ಇಟ್ಟು ನೀರು ಹಾಕುವ ಮೂಲಕ ಮತ್ತು ಕೋತಿಗಳಿಗೆ ಬ್ರೆಡ್, ಬಿಸ್ಕತ್, ಪಕ್ಷಿಗಳಿಗೆ ಕಾಳು ಹಾಕುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಹ ಕೆಲಸಕ್ಕೆ ಮುಂದಾಗಿದ್ದಾರೆ.
ಕೈಕೊಟ್ಟ ಮಳೆಯಿಂದಾಗಿ ಈ ಭಾರಿ ಹೆಚಿನ ಮಟ್ಟದಲ್ಲಿ ಒಣ ಹವೆ ಹೆಚ್ಚಾಗಿದ್ದು, ಮನುಷ್ಯರೇ ಪರದಾಡುವಂತಾಗಿದ್ದು, ಹಗಲು ವೇಳೆಯಲ್ಲಿ ಬೆಸಲಿನ ತಾಪ ಹೆಚ್ಚುಗುತ್ತಿದ್ದಂತೆ ಮನೆ, ಕಚೇರಿ, ಹೊಲ ಗದ್ದೆಗಳಿಂದ ಹೊರ ಬರುವುದನ್ನು ನಿಲ್ಲಿಸುತ್ತಿದ್ದಾರೆ.ಕೊರೋನಾ ಪ್ರಾರಂಭದ ಅಲೆಯ ಸಮಯದಲ್ಲಿ ಇವರು ಗುಡಿಬಂಡೆ ಪಟ್ಟಣದ ಗ್ರೀನ್ ವಾರಿಯರ್ಸ್ ತಂಡದೊಂದಿಗೆ ಕೈ ಜೋಡಿಸಿ ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳಿಗೆ ಚಿಕ್ಕ ತೊಟ್ಟಿಗಳನ್ನು ಇಟ್ಟು, ಅಲ್ಲಿಯೇ ಇದ್ದ ಕುಂಟೆಗಳಿಗೆ ಟ್ಯಾಂಕರ್ಗಳ ಮೂಲಕ ನೀರನ್ನು ಹಾಕಿ ವನ್ಯ ಜೀವಿಗಳ ದಾಹ ತಣಿಸಲು ಪ್ರಯತ್ನ ಪಟ್ಟಿದ್ದರು.
ಗುಂಪು ಮರದ ಆನಂದ್ ಹೇಳಿಕೆ: ಪ್ರತಿಯೊಬ್ಬರು ತಮ್ಮ ಮನೆಯ ಛಾವಣಿಯ ಮೇಲೆ ನೀರನ್ನು ಇಟ್ಟು ಪ್ರಾಣಿ ಪಕ್ಷಿಗಳ ದಾಹ ತೀರಲು ಸಹಕರಿಸಿ ಹಾಗೆಯೇ ತಮ್ಮ ಮನೆಗಳ ಹತ್ತಿರ ಸ್ವಲ್ಪ ಜಾಗ ಇದ್ದರು ಸಹ ಅಲ್ಲಿ ಸಸಿ ನೆಟ್ಟು ಪೋಷಣೆ ಮಾಡಿ ಎಂದರು.