ಬೆಂಗಳೂರು: ಅತಿ ಶೀಘ್ರದಲ್ಲೇ ರಾಜ್ಯ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಚಿವರ ನೇಮಕಾತಿ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಚರ್ಚೆ ನಡೆಸುತ್ತಿದ್ದಾರೆ.
ಸಂಪುಟಕ್ಕೆ ಹಿರಿಯನ್ನು ಸೇರ್ಪಡೆ ಹಾಗೂ ಕೈಬಿಡುವ ಸಂಬಂಧ ಸಿಎಂ ಡಿಸಿಎಂ ಹೇಳಿಕೆ ನೀಡಿಲ್ಲ. ಹೊಸ ಸರ್ಕಾರ ಬಂದಾಗ ಸಚಿವರ ಆಯ್ಕೆ ಪ್ರಕ್ರಿಯೆ ಸ್ವಾಭಿವಿಕ. ಈ ಹಿಂದೆ ಒಂದೂವರೆ ತಿಂಗಳು ಕಾಲ ಮುಖ್ಯಮಂತ್ರಿ ಒಬ್ಬರೇ ಇದ್ದರು.
ರಾಜ್ಯದ ಜನತೆಯ ನಿರೀಕ್ಷೆಗೆ ತಕ್ಕಂತೆ ಉತ್ತಮ ಆಡಳಿತವನ್ನು ನಮ್ಮ ಸರ್ಕಾರ ನೀಡಲಿದೆ. ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
Leave a Review