ಬೆಂಗಳೂರು: ಸಂವಿಧಾನದ ಪ್ರಕಾರ ಕೆಲಸ ಮಾಡಿದ್ದಾರೆ. ಕರಾಳ ರೀತಿಯಲ್ಲಿ ಈ ಅಧಿವೇಶವನ್ನು ಕಾಂಗ್ರೆಸ್ ನಡೆಸಿದೆ. ರಾಜ್ಯಪಾಲರು ಧನ್ಯವಾದ ಹೇಳಿ ಹೊರಟ್ಟಿದ್ದಾರೆ ತಪ್ಪೇನಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಭಾಷಣ ಮಾಡದೆ ಹೊರ ನಡೆದ ರಾಜ್ಯಪಾಲರ ನಡೆ ಸಮರ್ಥಿಸಿದ ಅವರು, ಆ ಚೇರನಲ್ಲಿ ಕುಳಿತು ಭಾಷಣ ಪ್ಲೇ ಮಾಡಿ ಹೋಗುವ ಅಧಿಕಾರವಿದೆ. ಕಾಂಗ್ರೆಸ್ನವರು ರಾಜ್ಯಪಾಲರಿಗೆ ಅಗೌರವ ತೋರಿಸಿದ್ದಾರೆ. ಲೊಕಭವನವನ್ನು ಕಾಂಗ್ರೆಸ್ ಭವನ ಮಾಡಲು ಹೊರಟಿದ್ದಾರೆ. ರಾಹುಲ್, ಸೋನಿಯಾ ಮೆಚ್ಚಿಸುವ ಕುತುಂತ್ರ ಇದು. ಕಾಂಗ್ರೆಸ್ ಪಕ್ಷದವರ ಗೂಂಡಾಗಿರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರ ನಡೆ ಸಮರ್ಥಿಸಿದ ಆರ್. ಅಶೋಕ್



