ಆರ್ ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಒಂದೊಂದೇ ಸರ್ಪ್ರೈಸ್ ಕೊಡುವುದಕ್ಕೆ ಶುರು ಮಾಡಿದೆ. ಟ್ರೈಲರ್ ರಿಲೀಸ್‌ಗೆ ಒಂದು ದಿನ ಬಾಕಿ ಉಳಿದಿದೆ ಅನ್ನುವಾಗಲೇ ಶಿವರಾಜ್‌ಕುಮಾರ್ ಸಿನಿಮಾದಲ್ಲಿ ನಟಿಸಿರುವ ರಹಸ್ಯವನ್ನು ಹೊರಹಾಕಿತ್ತು.
ಅಭಿಮಾನಿಗಳು ಇದನ್ನು ಅರಗಿಸಿಕೊಳ್ಳುವಾಗಲೇ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ.
ಟ್ರೈಲರ್‌ಗೂ ಮೊದಲೇ ಹಲ್‌ಚಲ್ ಎಬ್ಬಿಸಿದ ‘ಕಬ್ಜ’ ಪೋಸ್ಟರ್: ಶಿವಣ್ಣನ ಗ್ರ್ಯಾಂಡ್ ಎಂಟ್ರಿ ಕನ್ಫರ್ಮ್!
‘ಕಬ್ಜ’ ಸಿನಿಮಾದ ಪ್ಯಾನ್ ಇಂಡಿಯಾ ಟ್ರೈಲರ್ ಇಂದು (ಮಾರ್ಚ್ 4) ಸಂಜೆ 5 ಗಂಟೆ 2 ನಿಮಿಷಕ್ಕೆ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡಲು ಚಿಂತಿಸಿದ್ದಾರೆ. ಟ್ರೈಲರ್ ಬಿಡುಗಡೆಯ ಕೊನೆಯ ಕ್ಷಣದವರೆಗೂ ಯಾರು ರಿಲೀಸ್ ಮಾಡುತ್ತಾರೆ ಅನ್ನೋ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗಲೇ ಅಮಿತಾಭ್ ಬಚ್ಚನ್ ಹೆಸರನ್ನು ರಿವೀಲ್ ಮಾಡಿದ್ದಾರೆ.
ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ‘ಕಬ್ಜ’ ಸಿನಿಮಾ ಟ್ರೈಲರ್ ರಿಲೀಸ್ ಮಾಡುತ್ತಿರುವ ವಿಶೇಷ ಅತಿಥಿ. ಮುಂಬೈನಲ್ಲಿ ಸಂಜೆ 5 ಗಂಟೆ 2 ನಿಮಿಷಕ್ಕೆ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ. ಈ ಸಿನಿಮಾ ಟ್ರೈಲರ್ ನೋಡಿ ಮೆಚ್ಚಿರುವ ಅಮಿತಾಭ್ ಬಚ್ಚನ್ ಎಲ್ಲಾ ಭಾಷೆಯ ಟ್ರೈಲರ್ ಅನ್ನೂ ರಿಲೀಸ್ ಮಾಡಲು ಮುಂದಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯ ಟ್ರೈಲರ್ ಅನ್ನು ರಿಲೀಸ್ ಮಾಡಲಿದ್ದಾರೆ. ಈ ಸಂಬಂಧ ಅಮಿತಾಭ್ ಬಚ್ಚನ್ ಅವರೇ ನಿರ್ದೇಶಕ ಆರ್ ಚಂದ್ರುರನ್ನು ಮುಂಬೈಗೆ ಕರೆಸಿಕೊಂಡು ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ.
‘ಕಬ್ಜ’ ಈ ವರ್ಷ ರಿಲೀಸ್ ಆಗುತ್ತಿರುವ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಬಹುಭಾಷಾ ನಟಿ ಶ್ರಿಯಾ ಶರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾವಿದು. ಈ ಕಾರಣಕ್ಕೆ ‘ಕಬ್ಜ’ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಐದು ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗಲಿದ್ದು, ‘ಕೆಜಿಎಫ್ 2’ ಮಟ್ಟಕ್ಕೆ ಸಕ್ಸಸ್ ಸಿಗುತ್ತಾ? ಅನ್ನೋ ಕುತೂಹಲವಿದೆ.
ಭಾರತದಲ್ಲಿ ಅಂಡರ್‌ವರ್ಲ್ಡ್ ಹೇಗೆ ಉಗಮ ಆಯ್ತು ಅನ್ನೋದನ್ನು ಈ ಸಿನಿಮಾ ಆರ್ ಚಂದ್ರು ತೋರಿಸುವ ಪ್ರಯತ್ನ ಮಾಡಿದ್ದಾರೆ. ಟೀಸರ್ ಪ್ರಾಮಿಸಿಂಗ್ ಆಗಿದ್ದು, ಟ್ರೈಲರ್ ಮೇಲೆ ಎಲ್ಲರ ಕಣ್ಣಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಈ ಸಿನಿಮಾದ ಟ್ರೈಲರ್ ಅನ್ನು ಅಮಿತಾಬ್ ಬಚ್ಚನ್ ರಿಲೀಸ್ ಮಾಡಲಿದ್ದು, ಟ್ರೈಲರ್ ಯಾವ್ಯಾವ ದಾಖಲೆಗಳನ್ನು ಅಳಿಸಿ ಹಾಕಬಹುದು ಅನ್ನೋ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.
Leave a Review