ಅಂತಾಲಿಯ, ಟರ್ಕಿ: ಅಕ್ಷದೀಪ್ ಸಿಂಗ್ ಮತ್ತು ಪ್ರಿಯಾಂಕಾ ಗೋಸ್ವಾಮಿ ಅವರನ್ನೊಳಗೊಂಡ ಭಾರತದ ಮಿಶ್ರ ರಿಲೆ ತಂಡ ಭಾನುವಾರ ಇಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ರೇಸ್ ವಾಕಿಂಗ್ ಟೀಮ್ ಚಾಂಪಿಯನ್ಷಿಪ್ನಲ್ಲಿ 18 ನೇ ಸ್ಥಾನ ಪಡೆಯಿತು.
ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿತು.ಅಗ್ರ 22 ತಂಡಗಳು ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆಯುತ್ತವೆ. ಭಾರತದ ಜೋಡಿ 42.195 ಕಿ.ಮೀ ದೂರವನ್ನು ಕ್ರಮಿಸಿ, 3ಗಂಟೆ, 05 ನಿಮಿಷ, 3 ಸೆಕೆಂಡುಗಳಲ್ಲಿ ಗುರಿ ತಲುಪಿತು.
ಇಟಲಿಯ ಫ್ರಾನ್ಸೆಸ್ಕೊ ಫೋರ್ಟುನಾಟೊ ಮತ್ತು ವ್ಯಾಲೆಂಟಿನಾ ಟ್ರಾಪ್ಲೆಟ್ಟಿ ತಂಡ 2ಗಂ,56ನಿ, 45ಸೆ ಸಮಯದೊಂದಿಗೆ ಚಿನ್ನದ ಪದಕ ಗೆದ್ದಿತು. ಇದು ಇವರಿಬ್ಬರ ವೈಯಕ್ತಿಕ ಶ್ರೇಷ್ಠ ಸಮಯವಾಗಿದೆ.
ಜಪಾನಿನ ಇಕೆಡಾ ಮತ್ತು ಕುಮಿಕೊ ಒಕಾಡಾ 2ಗಂ,57ನಿ,:04 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಸ್ಪೇನ್ ನ ಅಲ್ವಾರೊ ಮಾರ್ಟಿನ್ ಮತ್ತು ಲಾರಾ ಗಾರ್ಸಿಯಾ-ಕ್ಯಾರೊ ಜೋಡಿ 2:57:47 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದುಕೊಂಡಿತು.