ಪ್ಯಾರಿಸ್: ರೋಲಂಡ್ ಗ್ಯಾರೋಸ್ನಲ್ಲಿ ಗೆಲುವಿನ ಹಲವು ದಾಖಲೆಗಳನ್ನು ಸ್ಥಾಪಿಸಿದ್ದ ಸ್ಪೇನ್ನ ರಫೆಲ್ ನಡಾಲ್ ಅವರ ಬಹುತೇಕ ಕೊನೆಯ ಫ್ರೆಂಚ್ ಓಪನ್ ಟೂರ್ನಿ ಸೋಮವಾರ ಮೊದಲ ಸುತ್ತಿನ ಸೋಲಿನೊಂದಿಗೆ ಅಂತ್ಯಗೊಂಡಿತು.
14 ಬಾರಿ ಇಲ್ಲಿ ಟ್ರೋಫಿ ಎತ್ತಿರುವ ನಡಾಲ್, ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅಲೆಕ್ಸಾಂಡರ್ ಜ್ವರೇವ್ ಅವರಿಗೆ ನೇರ ಸೆಟ್ಗಳಲ್ಲಿ ಮಣಿದರು. ಜೂನ್ 3ರಂದು 38ನೇ ವರ್ಷಕ್ಕೆ ಕಾಲಿಡಲಿರುವ ನಡಾಲ್ 6-3, 7-6 (7-5), 6-3 ರಿಂದ ಜರ್ಮನಿಯ ಆಟಗಾರನಿಗೆ ಮಣಿದರು.
2005 ರಲ್ಲಿ ಆವೆಮಣ್ಣಿನ ಅಂಕಣದ ಈ ಟೂರ್ನಿಯಲ್ಲಿ ಪ್ರಶಸ್ತಿಯೊಡನೆ ಪದಾರ್ಪಣೆ ಮಾಡಿದ್ದ ನಡಾಲ್ ಅವರಿಗೆ ಇದು ಇಲ್ಲಿ 116 ಪಂದ್ಯಗಳಲ್ಲಿ ಕೇವಲ ನಾಲ್ಕನೇ ಸೋಲು ಎನಿಸಿತು. ಅವರು ಇಲ್ಲಿ ಎಂದೂ ಮೊದಲ ಸುತ್ತಿನಲ್ಲಿ ಸೋತಿರಲಿಲ್ಲ.