ಬೆಂಗಳೂರು: `ನ್ಯಾಶನಲ್ ಕ್ರಿಕೆಟ್ ಅಕಾಡೆಮಿ’ಯಿಂದ `ಆಲ್ ಕ್ಲಿಯರ್ ಸರ್ಟಿಫಿಕೆಟ್’ ಪಡೆದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಐಪಿಎಲ್ಗೆ ಸಜ್ಜಾಗಿದ್ದಾರೆ. ಮೊದಲ ಪಂದ್ಯದಿಂದಲೇ ತಂಡಕ್ಕೆ ಲಭ್ಯರಾಗಲಿದ್ದಾರೆ.
ಆದರೆ ಅವರು ಕೀಪಿಂಗ್ ನಡೆಸುವ ಸಾಧ್ಯತೆ ಕಡಿಮೆ ಎಂಬುದಾಗಿ ವರದಿಯಾಗಿದೆ.ಮೊದಲ ಕೆಲವು ಪಂದ್ಯಗಳಲ್ಲಿ ಕೆ.ಎಲ್. ರಾಹುಲ್ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ, ಕೀಪಿಂಗ್ ನಡೆಸುವುದಿಲ್ಲ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಇವರ ಬದಲು ಕ್ವಿಂಟನ್ ಡಿ ಕಾಕ್ ಅಥವಾ ನಿಕೋಲಸ್ ಪೂರಣ್ ವಿಕೆಟ್ ಕೀಪಿಂಗ್ ನಡೆಸಲಿದ್ದಾರೆ.
ಪೂರಣ್ ಲಕ್ನೋ ತಂಡದ ಉಪನಾಯಕರೂ ಆಗಿದ್ದಾರೆ.ಎನ್ಸಿಎಯಲ್ಲಿ ಚಿತ್ರೀಕರಿಸಲಾದ ತಮ್ಮ ಬ್ಯಾಟಿಂಗ್ ಒಂದರ ಕಿರು ವೀಡಿಯೋವನ್ನು ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆ.ಎಲ್. ರಾಹುಲ್ ಬುಧವಾರ ಲಕ್ನೋ ತಲುಪಲಿದ್ದಾರೆ. ಇಲ್ಲಿಂದ ತಂಡದೊಂದಿಗೆ ಜೈಪುರಕ್ಕೆ ತೆರಳುವರು. ಇಲ್ಲಿ ಮಾ. 24ರಂದು ಆರ್ಸಿಬಿ ವಿರುದ್ಧ ಲಕ್ನೋ ತನ್ನ ಮೊದಲ ಪಂದ್ಯವಾಡಲಿದೆ.