ಬೆಂಗಳೂರು: ರಾಜಗೋಪಾಲ್ ನಗರ ಪೊಲೀಸರು 4 ಜನ ಆಸಾಮಿಗಳನ್ನು ಬಂಧಿಸಿ 13 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಪೀಣ್ಯ ಪೊಲೀಸರು 11 ಜನ ಆರೋಪಿಗಳನ್ನು ಎಚ್ ಎಂ ಟಿ ಲೇಔಟ್ ನಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣದಲ್ಲಿ ಬಂಧಿಸಿರುತ್ತಾರೆ.
ನಗದು ಹಾಗೂ 43 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಸಿಸಿಬಿ ಪೊಲೀಸರು ಮತ್ತು ಜಿಲ್ಲಾ ಉಪ ನಿಬಂಧಕರುಗಳು ಜಂಟಿ ಕಾರ್ಯಾಚರಣೆ ನಡೆಸಿ ಹೈ ಗ್ರೌಂಡ್ಸ್ ಮತ್ತು ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಮೀಟರ್ ಬಡ್ಡಿ ದಂದೆ ನಡೆಸುತ್ತಿದ್ದ ನಡೆಸುವ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿ ಎರಡುವರೆ ಲಕ್ಷಗಳನ್ನು ವಶಪಡಿಸಿಕೊಂಡಿರುತ್ತಾರೆ ಜಂಟಿ ಕಾರ್ಯಾಚರಣೆನಡೆಸಿರುತಾರೆ.
ಸಿಸಿಬಿಯ ದಳದವರು ಈಸ್ಟ್, ಆಗ್ನೇಯ, ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ 9 ಜನ ರೌಡಿಗಳ ಮೇಲೆ ದಾಳಿ ನಡೆಸಿ ಅವರುಗಳ ಮನೆಗಳಿಂದ ಅಪಾರ ಪ್ರಮಾಣವಾದ ಕಾಗದಪತ್ರಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿರುತ್ತಾರೆ.