ವಿಜಯಪುರ: ಬೆಂಗಳೂರು ನಗರ ಸೇರಿದಂತೆಇಡೀರಾಜ್ಯಾದ್ಯAತ ಭಾರಿ ಮಳೆ ಸುರಿಯುತ್ತಿದ್ದುಅದರಲ್ಲೂ ಕಲಬುರ್ಗಿ, ವಿಜಯಪುರ,ಯಾದಗಿರಿಯಲ್ಲಿ ಕಳೆದ ೪೮ ಗಂಟೆಗಳಿAದ ನಿರಂತರವಾಗಿ ಮಳೆ ಸುರಿಯುತ್ತಿದೆ.
ನೆರೆಯ ಮಹಾರಾಷ್ಟçದಲ್ಲಿ ಭಾರಿ ಮಳೆ ಹಿನ್ನೆಲೆಉಜನಿ, ವೀರಾಜಲಾಶಯದಿಂದ ೨.೯೦ ಲಕ್ಷಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದ ವಿಜಯಪುರದ ಭೀಮಾ ನದಿ ಪಾತ್ರದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ಆಲಮೇಲ ತಾಲೂಕಿನತಾವರಖೇಡಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ೮ ಮಂದಿಯನ್ನು ಸಿಂದಗಿ ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ.ಸದ್ಯತಾವರಖೇಡಗ್ರಾಮವನ್ನು ಭೀಮಾ ನದಿಯ ನೀರು ಸುತ್ತುವರೆದಿದ್ದು, ಜನಜೀವನಅಸ್ತವ್ಯಸ್ತವಾಗಿದೆ.
ಕಲಬುರಗಿಯಗಾಣಗಾಪೂರದ ಸಂಗಮ ಕ್ಷೇತ್ರಜಲಾವೃತಗೊಂಡಿದೆ.ಇತ್ತ ಮಹಾರಾಷ್ಟçದ ಜಲಾಶಯಗಳಿಂದ ನಿರಂತರವಾಗಿ ನೀರು ಬಿಡ್ತಿರೋ ಪರಿಣಾಮ ಭೀಮಾ ನದಿ ಅತ್ಯಂತಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ರೈತರ ಜಮೀನುಗಳಿಗೆ ನೀರು ನುಗ್ಗಿದ್ದುರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಜಾನುವಾರುಗಳು ನೀರಿನಲ್ಲಿಕೊಚ್ಚಿಹೋಗಿವೆ.
ಜಿಲ್ಲೆಯಲ್ಲಿ ಭೀಮಾನದಿ ಉಕ್ಕಿ ಹರಿಯುತ್ತಿರುವಕಾರಣ, ಇಂಡಿಯ ಆಲಮೇಲ ತಾಲೂಕಿನಲ್ಲಿ ಪ್ರವಾಹಉಂಟಾಗಿದೆ.ಕುಮಸಗಿ ಗ್ರಾಮದ ೩೦ಕ್ಕೂ ಅಧಿಕ ಮನೆಗಳು ಸಂಪೂರ್ಣಜಲಾವೃತವಾಗಿದ್ದು, ಮನೆಗಳಲ್ಲಿದ್ದ ಬೆಲೆಬಾಳುವ ವಸ್ತುಗಳು ಪಡಿತರ ಸಾಮಗ್ರಿಗಳು ನೀರಲ್ಲಿಕೊಚ್ಚಿ ಹೋಗಿವೆ. ಜನ ಮನೆಗಳನ್ನ ಬಿಟ್ಟುಗಂಜಿ ಕೇಂದ್ರಗಳಿಗೆ ಶಿಫ್ಟ್ ಆಗಿದ್ದು, ಭೀಮಾತಟದ ನೂರಾರುಎಕರೆ ಪ್ರದೇಶದ ಬೆಳೆ ಪ್ರವಾಹಕ್ಕೆಆಹುತಿಯಾಗಿದೆ.ಪ್ರತಿಎಕರೆಗೆ ೨೫,೦೦೦ ರೂಪಾಯಿ ಪರಿಹಾರ ಶೀಘ್ರ ನೀಡುವಂತೆಗ್ರಾಮಸ್ಥರು ಒತ್ತಾಯಿಸಿದ್ದಾರೆ.