ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ೯೩ ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಮಾತ್ರವಲ್ಲದೆ ಈ ಗೆಲುವಿನಿಂದ ಪಾಕಿಸ್ತಾನ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ೨೦೨೫- ೨೭ರ ಅಂಕಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿ ಏಕಾಏಕಿ ಎರಡನೇ ಸ್ಥಾನಕ್ಕೇರಿದೆ. ಆದರೆ, ಈ ಯಶಸ್ಸಿನ ನಡುವೆಯೂ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ರಾಮಿಜ್ ರಾಜಾ ಮತ್ತು ಆಮೀರ್ ಸೊಹೈಲ್ ಅವರು ಅನಗತ್ಯವಾಗಿ ಭಾರತದ
ವಿಷಯವಾಗಿ ಎಳೆದು ತಂದಿದ್ದಾರೆ. ಏಷ್ಯಾ ಕಪ್ ೨೦೨೫ರಲ್ಲಿ ಭಾರತ ತಂಡ ನಡೆಸಿದ್ದ ನೋ ಹ್ಯಾಂಡ್ ಶೇಕ್ ಅಭಿಯಾನದ ಬಗ್ಗೆ ಟೀಕಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇದು ಫ್ಯಾಶನ್ ಆಗುತ್ತಿದೆ ಎಂದು ನಾಲಗೆ ಹರಿಬಿಟ್ಟಿದ್ದಾರೆ. ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಮುಗಿದ ಬಳಿಕ ಇತ್ತಂಡಗಳ ಆಟಗಾರರು ಪರಸ್ಪರ ಅಭಿನಂದನೆಗಳನ್ನು ತಿಳಿಸುವ ವೇಳೆ ನಿರೂಪಣೆ ಮಾಡುತ್ತಿದ್ದ ಪಾಕಿಸ್ತಾನದ ಮಾಜಿ ನಾಯಕರಾದ ರಮೀಜ್ ರಾಜಾ ಹಾಗೂ ಆಮೀರ್ ಸೊಹೈಲ್, ಭಾರತ ತಂಡದ ವರ್ತನೆಯನ್ನು ಟೀಕಿಸಿದ್ದಾರೆ.
ಆಸ್ಟೆçÃಲಿಯಾ ತಂಡದ ಆಟಗಾರರು ಹಸ್ತಲಾಘವ ನಿರಾಕರಣೆಯನ್ನು ಮೂದಲಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಏಷ್ಯಾ ಕಪ್ ನಲ್ಲಿ ಏನಾಗಿತ್ತು? ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಭಟನಾರ್ಥವಾಗಿ ಭಾರತ ತಂಡ ಪಾಕಿಸ್ತಾನದ ಆಟಗಾರರೊಂದಿಗೆ ಹಸ್ತಲಾಘವ ಮಾಡಿರಲಿಲ್ಲ. ಅಷ್ಟೇ ಏಕೆ ಮಾತನಾಡಿಯೂ ಇರಲಿಲ್ಲ. ಏಷ್ಯಾ ಕಪ್ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಆಘಾ ಅವರ ಜೊತೆ ಕೂರಲು ಸೂರ್ಯಕುಮಾರ್ ಯಾದವ್ ನಿರಾಕರಿಸಿದ್ದರು.
ಫೋಟೋ ಶೂಟ್ ಗೂ ಜೊತೆಯಾಗಿ ನಿಂತಿರಲಿಲ್ಲ.
ಪ್ರತಿಯೊಂದು ಪಂದ್ಯದ ಟಾಸ್ ವೇಳೆಯೂ ಹಸ್ತ ಲಾಘವ ಮಾಡಿರಲ್ಲಿಲ್ಲ ಪಂದ್ಯಮುಗಿದ ಬಳಿಕವೂ ಎದುರಾಳಿ ತಂಡದಿAದ ಅಭಿನAದನೆ ಸ್ವೀಕರಿಸಿರಲಿಲ್ಲ. ಫೈನಲ್ ಪಂದ್ಯಕ್ಕೂ ಮುನ್ನ ಏಷ್ಯಾ ಕಪ್ ಟ್ರೋಫಿ ಜೊತೆ ಪಾಕ್ ನಾಯಕನೊಂದಿಗೆ ಫೋಟೋ ಶೂಟ್ ಮಾಡಲು ಸೂರ್ಯಕುಮಾರ್ ಯಾದವ್ ಅವರು
ನಿರಾಕರಿಸಿದ್ದರು. ಈ ಎಲ್ಲಾ ಬೆಳವಣಿಗೆಗಳು ವಿವಾದಕ್ಕೆ ಕಾರಣವಾಗಿದ್ದವು. ಮಹಿಳಾ ವಿಶ್ವಕಪ್ ನಲ್ಲೂ ಪುನರಾವರ್ತನೆ ಜೊತೆಗೆ ಮಹಿಳಾ ವಿಶ್ವಕಪ್ ೨೦೨೫ರ
ಗುಂಪು ಹಂತದ ಪಂದ್ಯದಲ್ಲೂ ಭಾರತ ತಂಡವು ಪಾಕಿಸ್ತಾನದ ಆಟಗಾರ್ತಿಯರೊಂದಿಗೆ ಕೈಕುಲುಕಲು ಮುಂದಾಗಿರಲಿಲ್ಲ. ಅಕ್ಟೋಬರ್ ೫ರಂದು (ಭಾನುವಾರ) ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ೮೯ ರನ್ಗಳಿಂದ ಸೋಲಿಸಿತು. ಈ ಮೂಲಕ ಏಷ್ಯಾ ಕಪ್ ೨೦೨೫ರಲ್ಲಿ ಪುರುಷರ ತಂಡವು ಅನುಸರಿಸಿದ ‘ನೋ-ಹ್ಯಾಂಡ್ಶೇಕ್’ (ಕೈಕುಲುಕದಿರುವ) ನಿಲುವನ್ನು ಮಹಿಳಾ ತಂಡವೂ ಮುಂದುವರಿಸಿತು.