ಬೆಂಗಳೂರು; ತಮ್ಮದೇ ಆದಂತಹ ಶೈಲಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸಂಪುಟ ಸಚಿವ ಸ್ಥಾನ ಕಳೆದುಕೊಂಡಿದ್ದ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಮತ್ತೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಯಿದೆ.
ಈ ವಿಷಯವನ್ನು ಗೃಹಸಚಿವ ಡಾ.ಜಿ. ಪರಮೇಶ್ವರ್ ಪರೋಕ್ಷವಾಗಿ ಬಹಿರಂಗಪಡಿಸಿದ್ದಾರೆ. ರಾಜಣ್ಣಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ಮುಖ್ಯಮಂತ್ರಿಯವರು ರಾಜಣ್ಣ ಅವರಿಗೆ ನಾನು ಎಲ್ಲಿದ್ದರೂ ಸಿಹಿಯನ್ನೆ ಕೊಡುವುದು. ಸಿಹಿಯನ್ನೇ ಕೊಡುತ್ತೇನೆ ಎಂದು ಹೇಳಿದ್ದಾರೆ. ಇನ್ನೇನು ಆಯಿತಲ್ಲ ಎಂದು ಉತ್ತರಿಸಿದ್ದಾರೆ. ಹೀಗಾಗಿ ರಾಜಣ್ಣ ಅವರಿಗೆ ಮತ್ತೆ ಸಚಿವ ಸಾನ ದೊರೆಯುವುದನ್ನು ಪರಮೇಶ್ವರ್ ತಿಳಿಸಿದ್ದಾರೆ.
ನಿನ್ನೆ ತುಮಕೂರಿನಲ್ಲಿ ರಾಜಣ್ಣ ಅವರ ಮನೆಯಲ್ಲಿ ಭೋಜನಕೂಟದಲ್ಲಿ ಮಾಂಸಾಹಾರವನ್ನ ಏರ್ಪಡಿಸಲಾಗಿದ್ದು, ಮಾಂಸಹಾರದ ಊಟದ ಬಗ್ಗೆ ಚರ್ಚೆ ನಡೆಸಿದ್ದೇವೆ. ಬೇರೆ ಯಾವುದೇ ರಾಜಕೀಯದ ಬಗ್ಗೆ ಚರ್ಚೆ ನಡೆಸಿಲ್ಲ ಇದೇ ಸಂದರ್ಭದಲ್ಲಿ ಸಷ್ಟಪಡಿಸಿದ್ದಾರೆ.
ಜೆಡಿಎಸ್-ಬಿಜೆಪಿ ಕೇಳಿ ಆಡಳಿತ ನಡೆಸುತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಗರಂ ಆದ ಪರಮೇಶ್ವರ್, ಶಿಡ್ಲಘಟ್ಟ ನಗರಸಭೆಯ ಆಯುಕ್ತೆ ಅಮೃತಾಗೌಡ ಅವರನ್ನು ನಿಂದಿಸಿ ನಾಪತ್ತೆ
ಯಾಗಿರುವ ಕಾಂಗ್ರೆಸ್ ಮುಖಂಡ ರಾಜೀವ್ಗೌಡ ಅವರ ಬಂಧನ ವಿಳಂಬ ಆಗುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ಆರೋಪಿಯನ್ನು ಆದಷ್ಟೂ ಕೂಡಲೇ ಬಂಧಿಸಲಾಗುವುದು, ಅವರ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದಿದ್ದಾರೆ.
ಶಾಸಕ ಜನಾರ್ಧನ ರೆಡ್ಡಿ ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ನಡೆಸುವ ಸಮಾವೇಶದ ಕುರಿತಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ಬಳ್ಳಾರಿಯಲ್ಲಿ ಸಮಾವೇಶಕ್ಕೆ ಇದುವರೆಗೂ ಪರ್ಮಿಷನ್ ಕೊಟ್ಟಿಲ್ಲ. ಅವಕಾಶ ಕೊಡೋ ವಿಚಾರ ಸ್ಥಳೀಯ ಪೊಲೀಸರಿಗೆ ಬಿಟ್ಟಿದ್ದೇವೆ. ಅಲ್ಲಿನ ಸ್ಥಿತಿಗತಿ ನೋಡಿಕೊಂಡು ನೀವು ಅವರಿಗೆ ಪರ್ಮಿಷನ್ ಕೊಡಬೇಕ ಬೇಡ್ವಾ ಅನ್ನೋದನ್ನ ನೀವೇ ತೀರ್ಮಾನ ಮಾಡಿ ಅಂತ ಹೇಳಿದ್ದೇವೆ. ಹಾಗಾಗಿ ಅಲ್ಲಿನ ಸ್ಥಳೀಯ ಪೊಲೀಸರು ಪರ್ಮಿಷನ್ ಕೊಡುವ ವಿಚಾರವಾಗಿ ನಿರ್ಧರಿಸುತ್ತಾರೆ ಎಂದರು.
ರಾಜಣ್ಣ ಮತ್ತೆ ಸಂಪುಟಕ್ಕೆ!?



