ದೇವನಹಳ್ಳಿ : ದೇಶದಲ್ಲಿ ನಿರುದ್ಯೋಗ ಬಡತನ ತೊಡೆದು ಹಾಕಲು ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಸಾದ್ಯವೆಂದು ಪಂಚ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅದ್ಯಕ್ಷ ಚನ್ನಹಳ್ಳಿ ರಾಜಣ್ಣ ತಿಳಿಸಿದರು.
ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನೂತನ ಅದ್ಯಕ್ಷ ಶಾಂತಕುಮಾರ್, ಸದಸ್ಯರಾದ ಪ್ರಸನ್ನ ಕುಮಾರ್, ರಾಮಚಂದ್ರಪ್ಪ, ಹಾಗೂ ಪಂಚ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅದ್ಯಕ್ಷ ಚನ್ನಹಳ್ಳಿ ರಾಜಣ್ಣ ಹಾಗೂ ತಾಲ್ಲೂಕು ಅದ್ಯಕ್ಷ ಜಗನ್ನಾಥ್ ಅವರಿಗೆ ಕೆಪಿಸಿಸಿ ಪರಿಶೀಷ್ಟ ಪಂಗಡದ ಸದಸ್ಯ ದೊಡ್ಡತತ್ತ ಮಂಗಲ ರಮೇಶ್ ಅವರ ತಂಡದ ವರು ನಗರದ ರೀಗಾನ್ ಹೋಟಲ್ ಬಳಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ,
ವಾಲ್ಮೀಕಿ ಜನಾಂಗ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿದ್ದಾರೆ, ನಮ್ಮ ಪಕ್ಷದ ಯುವ ಮುಖಂಡ ದೊಡ್ಡತತ್ತಮಂಗಲ ರಮೇಶ್ ಅವರಿಗೂ ಕೂಡ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ಕಲ್ಪಿಸಿಕೊಡಲು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು ನೂರಾರು ಸಂಖ್ಯೆಯಲ್ಲಿ ಈ ದಿನ ನಮ್ಮೆಲ್ಲರನ್ನು ಅಭಿನಂದಿಸಿದ ತಮ್ಮ ಸಮುದಾಯ ದವರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪಂಚ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅದ್ಯಕ್ಷ ಜಗನ್ನಾಥ್ ಮಾತನಾಡಿ,
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನು ಹಲವು ವರ್ಷಗ ಳಿಂದ ದುಡಿಸಿಕೊಳ್ಳುವ ಕೆಲಸ ಮಾತ್ರ ಮಾಡುತ್ತಿದ್ದರು ಸರ್ಕಾರ ಬಂದ ನಂತರ ಕಾರ್ಯಕರ್ತ ರನ್ನು ಇಲ್ಲಿವರೆಗೆ ಗುರುತಿಸುವ ಕೆಲಸ ಮಾಡಿರಲಿಲ್ಲ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆಎಚ್ ಮುನಿಯಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿಕೆ. ಶಿವಕುಮಾರ್ ಅವರ ಉತ್ತಮ ಆಡಳಿತ ದಿಂದ ಸ್ಥಳೀಯ ಮುಖಂಡರಿಗೆ ಸ್ಥಾನಮಾನ ಕಲ್ಪಿಸಿರು ವುದರ ಜೊತೆಗೆ ಪಕ್ಷ ಸಂಘಟನೆಯನ್ನು ಕೂಡ ಜೊತೆಯಲ್ಲಿ ಕೊಂಡುಯು ವಂತ ಜವಾಬ್ದಾರಿ ನಮ್ಮ ಹೆಗಲಿಗೆ ನೀಡಿದ್ದಾರೆ.
ಜೆಡಿಎಸ್, ಬಿಜೆಪಿಯಂತೆ ಕಾಂಗ್ರೆಸ್ ಪಕ್ಷವು ಕೂಡ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಅಭ್ಯರ್ಥಿ ಹೆಸರು ಘೋಷಣೆಗಾಗಿ ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ. ಯಾವ ಸರ್ಕಾರವು ಬಡವರ ಸಂಕಷ್ಟಗಳಿಗೆ ನೆರವಾಗಲಿಲ್ಲ, ಸ್ಥಿಮಿತ ಅವದಿಯೊಳಗೆ ಕಾಂಗ್ರೆಸ್ ಸರ್ಕಾರ ಅದಿಕಾರಕ್ಕೆ ಬಂದ ನಂತರ ಪಂಚ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ಮುಟ್ಟಿ ಸುವ ಕೆಲಸ ಮಾಡಿದೆ ಲೋಕಸಭಾ ಚುನಾವಣೆ ಯಲ್ಲಿ ಈ ಯೋಜನೆಯ ಪರಿಣಾಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಹಾಗೂ ಗೆಲುವಿನ ದಿಕ್ಸೂಚಿಗೆ ಸಾಕ್ಷಿ ಆಗದೆ ಎಂದು ಪ್ರಸ್ತಾಪಿಸಿದರು.
ಈ ವೇಳೆ ಚಿಕ್ಕಬಳ್ಳಾಪುರ ಲೋಕಸಭೆ ಯುತ್ ಕಾಂಗ್ರೆಸ್ ಮಾಜಿ ಅದ್ಯಕ್ಷ ವಿಜಯಕುಮಾರ್,ಕುಂದಾಣ ಬಿವಿ.ಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ ಮುನಿಯಪ್ಪ, ಚನ್ನಹಳ್ಳಿ ಶಿವಕುಮಾರ್, ಬೊಮ್ಮನಹಳ್ಳಿ ನಾರಾಯಣಸ್ವಾಮಿ, ದಂಡಿಗಾನಹಳ್ಳಿ ರಾಜಣ್ಣ, ಶಿವಪ್ಪ, ಮುನಿರಾಜು, ನಾರಾಯಣ ಸ್ವಾಮಿ, ವಲೇರಹಳ್ಳಿ ನಾಗೇಶ್, ದೊಡ್ಡತತ್ತ ಮಂಗಲ ಲೋಕೇಶ್, ಕೊಂಡಪ್ಪ, ಆಂಜಿನಪ್ಪ, ಚಿನ್ನಪ್ಪ, ಶಿವರಾಜು, ಮರಿಯಪ್ಪ, ಸೂಲಕುಂಟೆ ಆನಂದ್ ಮುಂತಾದವರು ಇದ್ದರು.