ಶಿಡ್ಲಘಟ್ಟ: ಕಳೆದ ಎರಡು ವರ್ಷದಿಂದ ಸಮಾಜ ಸೇವೆ ಮಾಡಲು ಬಂದಿದ್ದೇನೆ ಎಂದು ಹೇಳುತ್ತಿದ್ದ ಎಬಿಡಿ ಸಂಸ್ಥೆಯ ಅಧ್ಯಕ್ಷ ರಾಜೀವ್ ಗೌಡ ತನ್ನ ಪತ್ನಿಯೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಕಳೆದ ಹಲವಾರು ವಾರಗಳಿಂದ ಕಾಂಗ್ರೆಸ್ ಪಕ್ಷದ ಅಧಿಕೃತ “ಬಿ” ಫಾರಂ ತಂದೇ ತರುತ್ತೇನೆ ಎಂದು ಹಾಲಿ ಶಾಸಕ ವಿ.ಮನಿಯಪ್ಪ ಅವರೊಂದಿಗೆ ಬೂತ್ ಮಟ್ಟದ ಪ್ರಚಾರವನ್ನೂ ಸಹ ನಡೆಸಿದ್ದರು.
ನಿನ್ನೆ ಕೋಲಾರದಲ್ಲಿ ರಾಹುಲ್ ಗಾಂಧಿ ಅವರ ಕಾರ್ಯಕ್ರಮ ನಡೆದ ನಂತರ ಹಲವಾರು ಬೆಳವಣಿಗೆಗಳು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಸಿಗುವುದು ಅನುಮಾನವಾಗಿದ್ದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
Leave a Review