ಬೆಂಗಳೂರು: ದೂರಸಂಪರ್ಕ ಇಲಾಖೆ ವಿಜಯನಗರ ದೂರವಾಣಿ ವಿನಿಮಯ ಕೇಂದ್ರ ವತಿಯಿಂದ ಸತತವಾಗಿ 43 ವರ್ಷಗಳ ಕಾಲ ಅತೀ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ .
ರಿಯ ಕನ್ನಡ ಖ್ಯಾತ ಸಾಹಿತಿಗಳನ್ನ ಕರೆಸುವುದು. ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ದುಡಿದ ಮಾನ್ಯರಿಗೆ ಅಭಿನಂದಿಸುವುದು. ಹಲವಾರು ಕಾರ್ಯಕ್ರಮಗಳನ್ನ ನಡೆಸಿಕೊಂಡು ಬರುತ್ತಿದೆ.ಈ ಬಾರಿ ಸಹ ಬಿ.ಎಸ್.ಎನ್.ಎಲ್.ವತಿಯಿಂದ 68ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬೆಂಗಳೂರು ದೂರಸಂಪರ್ಕ ಇಲಾಖೆ ಹಿರಿಯ ಅಧಿಕಾರಿಗಳಾದ ಪಿ ಜಿ ಎಂ. ಶ್ರೀ ವೆಂಕಟೇಶ್ವರಲು ಉದ್ಘಾಟನೆಯನ್ನು ನೆರವೇರಿಸಿದರು.ಬಿ. ಎಸ್. ಎನ್. ಎಲ್. ಜನರಲ್ ಮ್ಯಾನೇಜರ್ ಶ್ರೀ. ಅನಂತ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಲೋಕೇಶ್. ಎಲ್. ಹಿರಿಯ ಅಧಿಕಾರಿಗಳಾದ ಕೆಂಗೇರಿ ಚಕ್ರಪಾಣಿ. ಕಿರಿಯ ಅಧಿಕಾರಿಗಳಾದ ಶಂಕರ್. ನೇತ್ರಾವತಿ. ಬಿ.ಎಸ್.ಎನ್.ಎಲ್. ಸಂಘದ ಮುಖಂಡರಗಳಾದ ಹೆಚ್. ವಿ .ಸುದರ್ಶನ್. ಎಚ್ .ವಿ .ಶಿವಲಿಂಗ ಪ್ರಸಾದ್. ಇಮ್ರಾನ್ ಭಾಷಾ. ಎ.ಎಂ. ಸೆಲ್ವಮ್. ಶ್ರೀ ಹನುಮಂತು . ಶ್ರೀ ಹನುಮ.ಇನ್ನು ಮುಂತಾದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.