ಪೀಣ್ಯ ದಾಸರಹಳ್ಳಿ: ಅಯೋಧ್ಯೆಯಲ್ಲಿ ಬಾಲರಾಮನಪ್ರತಿಷ್ಠಾಪನೆ ಹಿನ್ನಲೆಯಲ್ಲಿ ದಾಸರಹಳ್ಳಿ ಯ ಮಲ್ಲಸಂದ್ರದ ಬಿಎನ್ ಆರ್ ಪಬ್ಲಿಕ್ ಶಾಲೆಯ 1000 ಕ್ಕೂ ಹೆಚ್ಚು ಮಕ್ಕಳಿಂದ ಒಂದು ಕೋಟಿ ರಾಮ ನಾಮ ಕೋಟಿಯನ್ನು ಅಯೋದ್ಯೆಗೆ ಕಳುಹಿಸುವ ಮೂಲಕ ಸಂಭ್ರಮ ಮನೆ ಮಾಡಿತ್ತು.
ಈ ವೇಳೆ ಮಾತನಾಡಿದ ಪ್ರಾಂಶುಪಾಲ ಎನ್ ಭೂಷಣ್ ‘ರಾಮನಾಮ ಜಪದಿಂದಲೇ ಸಹಸ್ರ ವಿಷ್ಣುನಾಮ ಪುಣ್ಯ ದೊರಕುತ್ತದೆ ಎಂಬ ಪ್ರತೀತಿ ಇದೆ.ಪ್ರಜೆಗಳ ರಕ್ಷಣೆಗಾಗಿ ದೇವನಗರಿ ಅಯೋದ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಖಂಡ ಸಹಸ್ರಾರು ಕೋಟಿ ಭಕ್ತರ ಆಸೆ ನೇರೆವರಿಸಿ ಇಂದು ಭರತ ಖಂಡದಲ್ಲಿ 500 ವರ್ಷಗಳ ಇತಿಹಾಸವುಳ್ಳ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ಸಕಾರಗೊಳಿಸಿದ್ದಾರೆ. ಎಂದರು.
ಬಿಎನ್ ಆರ್ ಶಾಲೆಯ ಪ್ರಾಂಶುಪಾಲರು, ಭೋದಕರು, ಅಡಳಿತ ಮಂಡಳಿ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಅಡಳಿತ ಮಂಡಳಿ, ಶಿಕ್ಷಕವೃಂದ ,ಶಾಲಾ ಮಕ್ಕಳು ಕೋಟಿ ರಾಮನಾಮ ಬರೆದರು.ಇದೇ ವೇಳೆ ಶಾಲಾಮಕ್ಕಳು ಶ್ರೀರಾಮ, ಸೀತಾಮಾತೆ ಲಕ್ಷ್ಮಣ,ಅಂಜನೇಯ ವೇಷ ಭೂಷಣ ಎಲ್ಲರಗಮನ ಸೆಳೆಯಿತು ಹಾಗೇ ಶ್ರೀ ರಾಮನ ಹಾಡಿಗೆ ಶಾಲೆಯ ಮಕ್ಕಳು ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.ನಿವೃತ್ತ ಶಿಕ್ಷಕ ನಾಗರಾಜಯ್ಯ ಮಾಸ್ಟರ್ ರಾಮಭಜನೆ ಕಾರ್ಯಕ್ರಮ ನೆಡೆಸಿಕೊಟ್ಟರು.