This is the title of the web page
This is the title of the web page

ರಶ್ಮಿರಾವ್, ಅಶ್ವಿನಿ ಸುಧೀರ್ ತಂಡದಿಂದ ರಾಮನಮನ

ಬೆಂಗಳೂರು: ರಾಮನವಮಿ ಹಾಗೂ ಹನುಮಜಯಂತಿಯ ಅಂಗವಾಗಿ ಚೆನ್ನಮ್ಮನಕೆರೆ ಅಚ್ಚುಕಟ್ಟು, ಪರಂಪರ ಸಭಾಂಗಣದಲ್ಲಿ ರಶ್ಮಿರಾವ್ ಹಾಗೂ ಅಶ್ವಿನಿ ಸುಧೀರ್ ಇವರ ತಂಡ ರಾಮನಮನ ಎನ್ನುವಂತಹ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರರಾವ್, ಖ್ಯಾತ ನ್ಯಾಯವಾದಿಗಳಾದ ಶಿವಾನಂದ್, ದುರ್ಗಾ ಪ್ರಸಾದ್, ಸಂಜೆವಾಣಿ ಸಂಪಾದಕರಾದ ಜೆ.ಹೆಚ್.ಅನಿಲ್ ಕುಮಾರ್, ಪರಿಸರ ತಜ್ಞೆ ರೇವತಿ ಕಾಮತ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಏನೆಂದರೆ ನಮ್ಮ ಸಂಸೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವದು ಹಾಗೂ ದಾಸ ಸಾಹಿತ್ಯವನ್ನು ಬೆಳೆಸಿಕೊಂಡು ಹೋಗುತ್ತಿರುವಂತಹ ಮಹಿಳೆಯರಿಗೂ ಕೂಡಾ ಒಂದು ವೇದಿಕೆಯನ್ನು ಕಲ್ಪಿಸಬೇಕು ಎನ್ನುವದಾಗಿದೆ. ಈವಾಗ ನಮ್ಮ ಯುವಪೀಳಿಗೆ ಪಾಶ್ಚಾತ್ಯ ಸಂಸೃತಿಯೆಡೆಗೆ ಆಕರ್ಷಿತರಾಗ್ತಾ ಇದಾರೆ. ಆದ್ದರಿಂದ ಯುವಪೀಳಿಗೆಗೆ ನಮ್ಮ ಸಂಸೃತಿಯನ್ನು ಧಾರೆ ಎರೆಯೋದಕ್ಕೋಸ್ಕರ ಕೂಡಾ ಈ ಕಾರ್ಯಕ್ರಮ ಹಮಗಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಕ್ಕಳಿಗೋಸ್ಕರ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕಾರ್ಯಕ್ರಮವನ್ನೂ ಕೂಡಾ ನಡೆಸಲಾಗಿತ್ತು. ಒಂದು ಹೆಣ್ಣು ಕಲಿತರೆ ಶಾಲೆಯನ್ನು ತೆರೆದಂತೆ, ಅಂತೆಯೇ ಹೆಣ್ಣು ತಾನು ಕಲಿತ ವಿದ್ಯೆಯನ್ನು ತನ್ನ ಮನೆಯವರಿಗಷ್ಟೇ ಅಲ್ಲದೇ ಇಡೀ ಊರಿಗೆ ಕೂಡಾ ದಾನ ಮಾಡ್ತಾಳೆ.., ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎನ್ನುವ ಗಾದೆಯಂತೆ ಮಕ್ಕಳ ಹತ್ತಿರ ಪಾಲಕರು ಯಾವ ರೀತಿ ಇರ್ತಾರೋ ಮಕ್ಕಳು ಅದನ್ನೇ ಕಲಿತಾರೆ…., ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಂದೆಗಿಂತಲೂ ತಾಯಿಯ ಸ್ಥಾನ ಪ್ರಮುಖವಾಗಿದೆ. ಒಂದು ಹೆಣ್ಣಿಗೆ ಅಥವಾ ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಕ್ಕಿದರೆ ಅವಳು ಅದನ್ನು ಬೆಳೆಸಿಕೊಂಡು ಹೋಗುವದರಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಾಳೆ

ಕಾರ್ಯಕ್ರಮದ ರೂವಾರಿಗಳಾದ ರಶ್ಮಿರಾವ್ ಹಾಗೂ ಅಶ್ವಿನಿ ಇವರು 5ನೇ ತಾರೀಖಿನಂದು ಪೂರ್ಣಪ್ರಜ್ಞ ಲೇಔಟನ ರಾಯರಮಠದಲ್ಲಿ ಬೆಳಿಗ್ಗೆ 10ಗಂಟೆಯಿಂದ ರಾತ್ರಿ8 ಗಂಟೆಯವರೆಗೆ 12 ಭಜನಾ ತಂಡಗಳನ್ನು ಆಹ್ವಾನಿಸಿ, ಸುಮಾರು 130ಕ್ಕೂ ಹೆಚ್ಚಿನ ದಾಸರಪದಗಳನ್ನು ಸಮರ್ಪಣೆ ಮಾಡಿದ್ದರು..ಈ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ ಇದ್ದಾರೆ.

ಕಾರ್ಯಕ್ರಮದ ಸಂಘಟಕರು ಈ ರೀತಿಯ ಕಾರ್ಯಕ್ರಮಗಳನ್ನೂ ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಸಬೇಕಾಗಿದೆ, ಇದಕ್ಕೆ ಸಾರ್ವಜನಿಕರ ಸಹಕಾರ ಖಂಡಿತಾ ಬೇಕು ಎಂದು ಹೇಳಿದರು.