ಬೆಂಗಳೂರು: ಯುಗಳ ನರ್ತನದಲ್ಲಿ ತಂದೆ ಮಗನ ಅದ್ಭುತ ಪ್ರದರ್ಶನದೊಂದಿಗೆ ಮೈಸೂರು ಶ್ರೀರಂಗಯ್ಯ ನವರು ರಚಿಸಿದ ರಾಮಕಥಾಮೃತದ ಯುಗಳ ಗೀತೆಗೆ ಸಂಪೂರ್ಣ ರಾಮಾಯಣ ಪ್ರದರ್ಶನ ಗೊಂಡಿತು.ನಗರದ ಬಸವೇಶ್ವರ ನಗರದಲ್ಲಿನ ಸಾಧನ ಸಂಗಮ ನೃತ್ಯ ಕೇಂದ್ರದಲ್ಲಿ ನೃತ್ಯ ನಿರಂತರ ಕಾರ್ಯಕ್ರಮದಡಿ ನಡೆದ ಮಾಸಿಕ ನೃತ್ಯ ಕಾರ್ಯಕ್ರಮದಲ್ಲಿ ಯುಗಳ ನರ್ತನ ನೃತ್ಯವನ್ನು ನಾಟ್ಯದೇಗುಲ ಶಾಲೆಯ ನಾಟ್ಯಾಚಾರ್ಯ ವಿದ್ವಾನ್ ಎಂ ಸ್ವಾಮಿ,ಹಾಗು ಇವರ ಪುತ್ರನಾದ ಮನೀಶ್ ರವರ ಯುಗಳ ನರ್ತನ ಸಭಿಕರ ಮನಸೂರಗೊಂಡಿತು.
ದಶರಥನ ಪುತ್ರಕಾಮೇಷ್ಟಿ ಯಾಗ ದೊಂದಿಗೆ ಪ್ರಾರಂಭವಾದ ನೃತ್ಯ ಕಾರ್ಯಕ್ರಮ ದಲ್ಲಿ ತಂದೆ ಮಗನ ಪ್ರದರ್ಶನ ವಶಿಷ್ಟರ ಯಾಗ ರಕ್ಷಣೆ,ಪಿತೃವಾಕ್ಯ ಪರಿಪಾಲನೆ, ಶಿವಧನುರ್ಭಂಗ, ಸೀತಾಪರಿಣಯ, ಶಬರಿ, ಗುಹ, ಸೂರ್ಪಣಖಿಯ ಪ್ರಸಂಗ, ಸೀತಾಪಹರಣ, ಜಟಾಯುವಿನ ಸಂಹಾರ, ವಾಲಿ ಸುಗ್ರೀವರ ಕಾಳಗ, ಹನುಮಂತನು ಸಮುದ್ರ ದಾಟುವಿಕೆ, ಸಂಜೀವಿನಿ ಪರ್ವತದ ವೃತ್ತಾಂತ, ರಾಮರಾವಣರ ಯುದ್ದ ನಂತರ ಸ್ರೀರಾಮನ ಪಟ್ಟಾಭಿಷೇಕ ದೊಂದಿಗೆ ಸುಮಾರು ಒಂದೂವರೆ ಗಂಟೆ ನೃತ್ಯ ಪ್ರದರ್ಶನ ಪೂರ್ಣಗೊಂಡಿತು.
ವೇದಿಕೆಯ ಕಾರ್ಯಕ್ರಮದಲ್ಲಿ ಗುರು ಜ್ಯೋತಿ ಪಟ್ಟಾಭಿರಾಂ ರವರು ಮಾತನಾಡಿ ಸ್ವಾಮಿ ರವರು ರಾಮಾಯಣ ಕಾರ್ಯಕ್ರಮದಡಿ 1001 ಪ್ರದರ್ಶನ ನೀಡಬೇಕೆಂದು ಸಂಕಲ್ಪ ಮಾಡಿರುವುದು ಅಭಿನಂದನೀಯ ಎಂದರು.ಸಪ್ತಸ್ವರ ಅರ್ಟ್ ಅಂಡ್ ಕ್ರಿಯೇಷನ್ಸ್ ಶ್ರೀಮತಿ ಮಂಜುಳಪರಮೇಶ್ ರವರು ಸ್ವಾಮಿ ರವರ ನೃತ್ಯ ಸೇವೆಯ ಬಗ್ಗೆ ತಿಳಿಸಿದರು.
ಇನ್ನೋರ್ವ ಅತಿಥಿಯಾದ ಹಿರಿಯ ಪತ್ರಕರ್ತ ಮಾತನಾಡಿ ಯುಗಳ ನರ್ತನದಲ್ಲಿ ತಂದೆ ಮಗನ ಪ್ರದರ್ಶನ ಅದ್ಭುತವಾಗಿತ್ತು.ಇಂತಹ ಅದ್ಭುತ ಕಲೆ ಕೇವಲ ನಗರ ಪ್ರದೇಶಗಳಿಗೆ ಸೀಮಿತ ವಾಗದೇ ಜನಪದ ಹುಟ್ಟಿದ ಗ್ರಾಮಾಂತರ ಪ್ರದೇಶಗಳಿಗೆ ತರಳಿದಾಗ ಜನಸಾಮಾನ್ಯರಿಗೂ ಈ ಕಲೆಯ ಬಗ್ಗೆ ಅರಿವು ಮೂಡುತ್ತದೆ ಎಂದರು. ಗಂಧರ್ವ ಮಹಾವಿದ್ಯಾಲಯದ ಪರೀಕ್ಷೆಗಳಲ್ಲಿ ತೀರ್ಗಡೆ ಆದ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಮಾಣ ಪತ್ರ ವಿತರಿಸಿದರು.sಸುಮನ ರವರ ನಿರೂಪಣೆ ಯಲ್ಲಿ ಕಾರ್ಯಕ್ರಮ ಸೊಗಸಾಗಿ ಮೂಡಿ ಬಂದಿತು. ತುಂಬಿದ ಸಭಾಂಗಣ ರಾಮಾಯಣದ ಪ್ರತಿ ಅಂಕಣಕ್ಕೂ ಸಭಿಕರ ಚಪ್ಪಾಳೆ ಕೊನೆ ವರಿಗೂ ಕೇಳಿಸಿತು.