ದೇವನಹಳ್ಳಿ: ಜೆಸಿಐ ಸಂಸ್ಥೆಯು ಇಂದಿನ ಸಮಾಜದಲ್ಲಿ ಯುವಕರನ್ನು ಕ್ರೀಯಾಶೀಲ ನಾಗರಿಕರನ್ನಾಗಿ ರೂಪಿಸುವುದೇ ಈ ಸಂಸ್ಥೆಯ ಮುಖ್ಯ ಉದ್ದೇಶ ಸಮಾಜದ ಸೇವಾ ಕಾರ್ಯಕ್ರಮಗಳು ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ರಾಷ್ಟ್ರೀಯ ಉಪಾಧ್ಯಕ್ಷ ಜೆ.ಎಫ್.ಎಸ್ ರಮೇಶ್ ದಡಗಲ್ ತಿಳಿಸಿದರು.
ಪಟ್ಟಣದ ಬಿ.ಬಿ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಆವರಣದಲ್ಲಿ ಜೆಸಿಐ ದೇವನಹಳ್ಳಿ ಡೈಮಂಡ್ ಘಟಕ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಮಲ್ಟಿ ಲೋಕಲ್ ಆರ್ಗನೈಸೇಶನ್ ಮಿಟ್ ಕಾರ್ಯಮದಲ್ಲಿ ಮಾತನಾಡಿದರು ಅಂತರ ರಾಷ್ಟ್ರೀಯ ವಿಶ್ವದ ಅತೀ ದೊಡ್ಡ 2ನೇ ಸ್ಥಾನದ ಕ್ರೀಯಾಶೀಲ ಸಂಸ್ಥೆಯಾಗಿದೆ ಯುವ ಜನತೆಯಲ್ಲಿ ಗುಣಾತ್ಮಕ ಬದಲಾವಣೆ ಮಾಡುವುದು ಮತ್ತು ಅಭಿವೃದ್ದಿಯ ಅವಕಾಶಗಳನ್ನು ಒದಗಿಸುವುದು ಈ ಸಂಸ್ಥೆಯ ಉದ್ದೇಶ ಎಂದು ಹೇಳಿದರು.
ಜೆಸಿಐ ದೇವನಹಳ್ಳಿ,ಜೇಸಿಐ ಚಪ್ಪರಕಲ್ಲುಚಂದನ, ಜೇಸಿಐ ವಿಜಯಪುರ, ಈ ಮೂರು ಘಟಕಗಳು ಭಾಗವಹಿಸಿದ್ದವು ಈ ಎಲ್ಲಾ ಘಟಕಗಳು ಮೂರು ತಿಂಗಳ ಕಾರ್ಯಕ್ರಮಗಳ ವರದಿಯನ್ನು ರಾಷ್ರೀಯ ಉಪಾಧ್ಯಕ್ಷರ ಅಧಿಕೃತ ಬೇಟಿ ಸಂದರ್ಬದಲ್ಲಿ ಕಾರ್ಯಕ್ರಮಗಳ ವಿವರಣೆ ಕೊಟ್ಟು ರಿಪೋರ್ಟ ಸಬ್ಮಿಟ್ ಮಾಡಿದರು.
ಇದೇ ಸಮಯದಲ್ಲಿ ವಲಯ ಅಧ್ಯಕ್ಷೆ ಜೆ.ಎಫ್.ಎಸ್ ಆಶಾ ಜೈನ್, ಜೇಸಿ ದೇವನಹಳ್ಳಿ ಡೈಮಂಡ್ ಅಧ್ಯಕ್ಷ ಜೆಸಿ ಸುಂದ್ರೇಶ್, ಮೂರು ಘಟಕಗಳ ಅಧ್ಯಕ್ಷರುಗಳು ಮತ್ತು ಎಲ್ಲಾ ಪುರ್ವಾಧ್ಯಕ್ಷರುಗಳು ಹಾಗೂ ಸದಸ್ಯರುಗಳು ಹಾಜರಿದ್ದರು.