ಬೆಂಗಳೂರು: ಇಡೀ ಭಾರತ ದೇಶ ರಾಮಮಯವಾಗಿದೆ ಜನರೆಲ್ಲರೂ ಸ್ವಯಂಪ್ರೇರಿತರಾಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಹಬ್ಬದ ವಾತಾವರಣವನ್ನ ಸಹಿಸದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರಜೆ ಕೊಡಲು ನಿರಾಕರಿಸಿದೆ ಎಂದು ಆರ್. ಅಶೋಕ್ ಅಸಮಾಧಾನ ಹೊರ ಹಾಕಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಕೈಹಿಡಿದ ಮಡದಿ ಮಂಡೋದರಿ, ಒಡ ಹುಟ್ಟಿದ ತಮ್ಮ ವಿಭೀಷಣ ರಾಮ ದ್ವೇಷ ಬೇಡ ಎಂದು…ಎಷ್ಟೇ ಹೇಳಿದರೂ ಕೇಳದ ರಾವಣನ ಗತಿ ಕಡೆಗೆ ಏನಾಯಿತು? ಅಧರ್ಮದ ಹಾದಿ ಹಿಡಿದು,
ಸ್ವಂತ ದಾಯಾದಿಗಳ ಮೇಲೇ ಯುದ್ಧ ಸಾರಿ, ಶ್ರೀಕೃಷ್ಣನನ್ನು ಎದುರು ಹಾಕಿಕೊಂಡ ದುರ್ಯೋಧನನ ಕಥೆ ಕಡೆಗೆ ಏನಾಯ್ತು? ತ್ರೇತಾ ಯುಗದಲ್ಲಿ ರಾವಣನಿಗೆ, ದ್ವಾಪರ ಯುಗದಲ್ಲಿ ದುರ್ಯೋಧನನಿಗೆ ಆದ ಗತಿಯೇ ಕಲಿಯುಗದ ರಾಮ ದ್ವೇಶಿಗಳಿಗೂ ಆಗಲಿದೆ ಎಂದಿದ್ದಾರೆ.