ಚಿಂತಾಮಣಿ: ನಗರದ ಹೃದಯ ಭಾಗದಲ್ಲಿರುವ ಅಜಾದ್ ಚೌಕದ ದೊಡ್ಡಪೇಟೆ ರಸ್ತೆಯಲ್ಲಿರುವ ಶ್ರೀ ಸೀತಾರಾಮ ಆಂಜನೇಯಸ್ವಾಮಿ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ವನ್ನು ಸಾವಿರಾರು ಭಕ್ತಾದಗಳು ದರ್ಶನ ಪಡೆದು ರಾಮನ ಜಪ ಮಾಡಿ ವಿಶೇಷ ಪೂಜೆ ಮತ್ತು ಭಜನೆ ಮಾಡಿ ರಾಮನನ್ನು ಆರಾದಿಸಿದರು.
ದೇವಸ್ಥಾನದ ಉಪಾಧ್ಯಕ್ಷರು ಹಾಗೂ ಮಾಜಿ ನಗರಸಭಾ ಸದಸ್ಯರಾದ ಕೆ. ಏನ್. ಸುಬ್ಬರಾಮ್ ಮಾತನಾಡಿ ಈ ದೇವಸ್ಥಾನ ಇತಿಹಾಸ 75 ವರ್ಷಗಳ ಹಿಂದೆ ಇದು ಭಜನ ಮಂದಿರವಾಗಿತ್ತು, ಬಹಳ ಶಿತಿಲವಾಗಿತ್ತು ಕಳೆದ ಎರಡು ವರ್ಷಗಳ ಹಿಂದೆ ಎಲ್ಲಾ ಭಕ್ತದಿಗಳಿಂದ ಹಣ ಸಂಗ್ರಹಣ ಮಾಡಿ ಇದೊಂದು ಭವ್ಯವಾದ ಶ್ರೀ ಸೀತಾರಾಮ ಆಂಜನೇಯಸ್ವಾಮಿ ಮಂದಿರದವನ್ನು ನಿರ್ಮಾಣ ಮಾಡಲಾಗಿದೆ,
ಪ್ರತಿ ಶನಿವಾರ ವಿಶೇಷ ಅಭಿಷೇಕ ಮತ್ತು ಪ್ರತಿ ದಿನ ಅಭಿಷೇಕವಿರುತ್ತದೆ,ಇಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಇಂದು ಬೆಳಗ್ಗೆ 10 ಗಂಟೆಯಿಂದ ಅಭಿಷೇಕ ಮತ್ತು 12 ಗಂಟೆ ನಂತರ ಮಹಾಮಂಗಳಾರತಿ ಸುಮಾರು ಸಾವಿರಾರು ಜನರು ದರ್ಶನ ಪಡೆದು ತೀರ್ಥ ಪ್ರಸಾದವನ್ನು ಪಡೆದು ರಾಮನ ದರ್ಶನ ಪಡೆದರು ಎಂದು ತಿಳಿಸಿದರು.
ನಂತರ ಭಕ್ತಾದಿಗಳಾದ ಮುರಳಿ ಮಾತನಾಡಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ನಮ್ಮೆಲ್ಲರಿಗೂ ಖುಷಿ ವಿಚಾರವಾಗಿದ್ದು, ಇಡೀ ದೇಶವೇ ಸಂತೋಷ ಪಡುವ ವಿಚಾರವಾಗಿದ್ದು ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ರವರಿಗೆ ಇಡೀ ನಮ್ಮ ಚಿಂತಾಮಣಿ ಜನತೆಯ ಪರವಾಗಿ ತುಂಬುಹೃದಯದ ಧನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೋಲ್ಡ್ ಕೃಷ್ಣಾ,ಅಪೋಲೋ ಪ್ರತಾಪ್,ಕಾಫಿ ಡೇ ಪರಮೇಶ್, ಮಣಿ, ಮುರಳಿ, ಅಶೋಕ್, ಅಶ್ವಿನ್, ಉಮೇಶ್, ರವಿ, ಬಾಲು, ಅನಿಲ್, ನಿತಿನ್, ನವೀನ್, ಅಜಯ್ ಹಾಗೂ ಭಕ್ತಾದಿಗಳು ಭಾಗಿಯಾಗಿದ್ದರು.