ಪ್ರಯೋಗದಾಟಗಳ ರಂಗ ಕೇಂದ್ರವೆಂದೇ ಪ್ರಸಿದ್ಧಿ ಇರುವ ನಾಟಕಮನೆ ತುಮಕೂರು ರಂಗ ತಂಡವು ನಿರಂತರವಾಗಿ ರಂಗ ಉತ್ಸವ, ನಾಟಕಗಳು, ವಿಚಾರ ಸಂಕಿರಣಗಳು, ರಂಗ ಕಾರ್ಯಾಗಾರಗಳು, ಸಾಧಕರಿಗೆ ಅಭಿನಂದನೆ ಹೀಗೆ ಹಲವಾರು ರೀತಿಯ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಇದೀಗ ದಿನಾಂಕ 17-05-2024ರ ಶುಕ್ರವಾರ ಸಂಜೆ 6ಕ್ಕೆ ತುಮಕೂರು ನಗರದ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ, ಕನ್ನಡ ರಂಗಭೂಮಿಯಲ್ಲಿ ನಟನೆ, ನಿರ್ದೇಶನ, ಸಂಘಟನೆ ಹೀಗೆ ವಿವಿಧ ಪ್ರಕಾರಗಳಲ್ಲಿ ಜನಮನ್ನಣೆ ಗಳಿಸಿರುವ ಕಲಾವಿದರಿಗೆ ರಂಗಗೌರವವನ್ನು ನೀಡಿ ಅಭಿನಂದಿಸಲಾಗುತ್ತದೆ.
ನಂತರ ಮಹಾಕವಿ ಭಾಸನ ಮಧ್ಯಮ ವ್ಯಾಯೋಗ, ಧೂತ ಘಟೋತ್ಕಚ, ಕರ್ಣಭಾರ ಮತ್ತು ಊರುಭಂಗ ನಾಟಕಗಳನ್ನು ಸಂಯೋಗಿಸಿಕೊಂಡ “ಭಾಸ ಭಾರತ” ಎಂಬ ರಂಗಪ್ರಯೋಗವು ಶಿವು ಹೊನ್ನಿಗನಹಳ್ಳಿರವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಉಚಿತ ಪ್ರವೇಶವಿರುವ ಈ ಕಾರ್ಯಕ್ರಮಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರಂಗಸಂಘಟಕ ನಾಟಕಮನೆ ಮಹಾಲಿಂಗು ಮನವಿ ಮಾಡಿದ್ದಾರೆ.