ಬೆಂಗಳೂರು: ಬೆಂಗಳೂರಿನ ಪ್ರಮುಖ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಒಂದಾಗಿರುವ ನಾರಾಯಣ ಹೆಲ್ತ್ನ ವೈದ್ಯರು, ಶ್ವಾಸಕೋಶದಲ್ಲಿ ಸಂಕೀರ್ಣ ಸ್ವರೂಪದ ಗೆಡ್ಡೆ ಹೊಂದಿದ್ದ ಯುವ ತಾಯಿಯ ಜೀವ ಉಳಿಸಲು ವಿಶಿಷ್ಟ ರೋಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಮಹಿಳೆಯ ಬಲ ಶ್ವಾಸಕೋಶದ ಶ್ವಾಸನಾಳದ ಸಂಗಮ ಸ್ಥಳದಿಂದ ದೊಡ್ಡ ಗೆಡ್ಡೆ ತೆಗೆದುಹಾಕಲು ಈ ಅತ್ಯಂತ ಸಂಕೀರ್ಣವಾದ ವಿಧಾನವನ್ನು ಡಾ ವಿಜಯ್ ನೇತೃತ್ವದ ಶಸ್ತ್ರಚಿಕಿತ್ಸಕರ ತಂಡವು ಬಳಸಿ ಡ ವಿಂಚಿ ರೋಬೊಟಿಕ್ ನೆರವಿನ ಶಸ್ತ್ರಚಿಕಿತ್ಸಾ ವೇದಿಕೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ.
ಮೂವತ್ತರ ಹರೆಯದ ಯುವ ತಾಯಿ, ತನ್ನ ಬಲ ಶ್ವಾಸಕೋಶದಲ್ಲಿ ದೊಡ್ಡ ಗೆಡ್ಡೆಯ ಕಾರಣದಿಂದಾಗಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಳು.ಈ ಪ್ರಕರಣದ ಸಂಕೀರ್ಣತೆಯ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರಿನ ಎನ್ಎಚ್ ಮಜುಂದಾರ್ ಶಾ ಕ್ಯಾನ್ಸರ್ ಸೆಂಟರ್ನ ರೋಬೊಟಿಕ್ ಸರ್ಜನ್, ಡಾ. ವಿಜಯ್ ಅವರು, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಗೆಡ್ಡೆಯು ಶ್ವಾಸನಾಳಗಳು ಸಂಧಿಸುವ ಸ್ಥಳದಲ್ಲಿ ಇದೆ ಎನ್ನುವುದು ಸ್ಪಷ್ಟವಾಗಿತ್ತ.
ಮೂರು ಆಯಾಮದ ದೃಶ್ಯ ಹಾಗೂ ಶಸ್ತ್ರಚಿಕಿತ್ಸರ ನೈಪುಣ್ಯತೆಯ ನೆರವಿನಿಂದ ಗೆಡ್ಡೆ ಇರುವ ಸ್ಥಳವನ್ನುನಿಖರವಾಗಿ ಗುರುತಿಸಲಾಗಿತ್ತು. ಇದು ಗೆಡ್ಡೆ ಇರುವ ನಿರ್ದಿಷ್ಟ ಪ್ರದೇಶವನ್ನು ತಲುಪಲು ನಮಗೆ ಸಹಾಯ ಮಾಡಿತು. ಬಲಭಾಗದಲ್ಲಿರುವ ಮುಖ್ಯ ಶ್ವಾಸನಾಳ
ವನ್ನು ಕತ್ತರಿಸಿ ಎಲ್ಲಾ ಶಾಖೆಗಳ ನಡುವಣ ಸಂಪರ್ಕ ಕಡಿತಗೊಳಿಸಲಾಯಿತು.
ನಂತರ, ಗೆಡ್ಡೆಯ ಜೊತೆಗಿನ ಕೂಡು ಭಾಗವನ್ನು ಸಂಧಿಸುವ ಸ್ಥಳವನ್ನು ತೆಗೆದುಹಾಕಲಾಯಿತು. ಶ್ವಾಸನಾಳದ ಮೂರು-ಬಿಂದುಗಳ ಜಂಕ್ಷನ್ನಲ್ಲಿ ಗೆಡ್ಡೆಯ ಸಂಕೀರ್ಣತೆಯು ಉಲ್ಬಣಗೊಂಡಿತ್ತು. ಅಲ್ಲಿ ನಾವು ಶ್ವಾಸನಾಳದ ಬಹು ಶಾಖೆಗಳನ್ನು ಪುನರ್ ರೂಪಿಸಿ ಸಂಪರ್ಕಿಸಬೇಕಾಗಿತ್ತು” ಎಂದು ವಿವರಿಸಿದರು.
ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ತಮಗೆ ಹೊಸ ಬದುಕು ನೀಡಿದ ಶಸ್ತ್ರಚಿಕಿತ್ಸಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿರುವ 35 ವರ್ಷದ ಮಹಿಳೆ ಮಾತನಾಡಿ, “ಡಾ. ವಿಜಯ್ ಮತ್ತು ನಾರಾಯಣ ಹೆಲ್ತ್ನಲ್ಲಿರುವ ಇಡೀ ವೈದ್ಯಕೀಯ ತಂಡಕ್ಕೆ ನನ್ನಅಪಾರ ಕೃತಜ್ಞತೆಯನ್ನು ಹೇಳುವುದಕ್ಕೆ ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನಾನು ನಿಜವಾಗಿಯೂ ಅದೃಷ್ಟಶಾಲಿಯಾಗಿರುವೆ” ಎಂದು ಹೇಳಿದ್ದಾರೆ.