ಭಾರತದ ಪ್ರಮುಖ ಬಿಸ್ಕತ್ತು ಮತ್ತು ಬೇಕರಿ ಬ್ರಾಂಡ್ಗಳಲ್ಲಿ ಒಂದಾದ ಬಿಸ್ಕ್ ಫಾರ್ಮ್ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರನ್ನು ಬ್ರಾಂಡ್ ಅಂಬಾಸಿಡರ್(ರಾಯಭಾರಿ) ಆಗಿ ಆಯ್ಕೆ ಮಾಡಿರುವುದಾಗಿ ಪ್ರಕಟಿಸಿದೆ. ಬಹುಮುಖ ಪ್ರತಿಭೆಯ, ಪ್ರಶಸ್ತಿ ವಿಜೇತ ನಟಿ ‘ರಸ್ಕಿಟ್ ಬ್ರ್ಯಾಂಡ್’ನ ಮುಖವಾಗಲಿದ್ದಾರೆ, ಈ ಬ್ರ್ಯಾಂಡ್ ಚಹಾ-ಸಮಯಕ್ಕೆ ಉತ್ತಮ ಪಾಲುದಾರನಾಗಬಲ್ಲ ರುಚಿಕರವಾದ ಟೋಸ್ಟ್(ರಸ್ಕ್) ಅನ್ನು 4 ಮಾದರಿಗಳಲ್ಲಿ ಒದಗಿಸುತ್ತದೆ.
ಬಿಸ್ಕ್ ಫಾರ್ಮ್ ತನ್ನ ನಾವೀನ್ಯತೆ, ಗುಣಮಟ್ಟ ಮತ್ತು ಸುವಾಸನೆಗೆ ಹೆಸರುವಾಸಿಯಾಗಿದೆ, ಇದೀಗ ಬ್ರ್ಯಾಂಡ್ ರಶ್ಮಿಕಾ ಮಂದಣ್ಣ ರಾಯಭಾರಿತ್ವದಲ್ಲಿ ಮಾರುಕಟ್ಟೆಯಲ್ಲಿ ಭಾರಿ ಗಮನ ಸೆಳೆಯಲು ಮತ್ತು ಭಾರತದಾದ್ಯಂತ ಮನೆಯ ಮಾತಾಗುವ ನಿಟ್ಟಿನಲ್ಲಿ ಹೊಸ ಎತ್ತರಕ್ಕೆ ಏರಲು ಸಿದ್ಧವಾಗಿದೆ.
ರಶ್ಮಿಕಾ ತನ್ನ ಅಪೂರ್ವ ಎನರ್ಜಿ ಮತ್ತು ಉತ್ಸಾಹಭರಿತ ವ್ಯಕ್ತಿತ್ವದ ಮೂಲಕ, ತನ್ನ ರುಚಿಕರವಾದ ಉತ್ಪನ್ನಗಳಿಂದ ಗ್ರಾಹಕರಿಗೆ ಸಂತೋಷ ನೀಡುವ ಬಿಸ್ಕ್ ಫಾರ್ಮ್ ಕಂಪನಿಯ ಬದ್ಧತೆಯನ್ನು ಪ್ರತಿಬಿಂಬಿಸಲಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಬಿಸ್ಕ್ ಫಾರ್ಮ್ ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಸಿಂಗ್, ಪಾಲುದಾರಿಕೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಾ, “ಬಿಸ್ಕ್ ಫಾರ್ಮ್ ಕುಟುಂಬಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಸ್ವಾಗತಿಸಲು ನಾವು ಸಂತೋಷಪಡುತ್ತೇವೆ” ಎಂದು ಹೇಳಿದ್ದಾರೆ.
ಬ್ರ್ಯಾಂಡ್ ಜೊತೆಗಿನ ಒಡನಾಟದ ಬಗ್ಗೆ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದ ರಶ್ಮಿಕಾ ಮಂದಣ್ಣ, “ಬಿಸ್ಕ್ ಫಾರ್ಮ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಫ್ಎಂಸಿಜಿ ಬ್ರ್ಯಾಂಡ್ಗಳಲ್ಲಿ ಒಂದಾಗಿದೆ ಮತ್ತು ಬೆಳವಣಿಗೆ ಮತ್ತು ನಾವೀನ್ಯತೆ ಕಡೆಗಿನ ಅವರ ಬದ್ಧತೆ ನನ್ನಲ್ಲಿ ಆಳವಾಗಿ ಪರಿಣಾಮ ಬೀರಿದೆ. ಈ ಪಾಲು ದಾರಿಕೆಯು ಫಲಪ್ರ ದವಾಗಲಿದೆ ಎಂದು ನಾನು ನಂಬುತ್ತೇನೆ” ಎಂದು ಹೇಳಿದ್ದಾರೆ.