ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಸದ್ದಿಲ್ಲದೆ ಎಂಗೇಜ್ ಆಗಿದ್ದಾರೆ. ಎರಡು ಕುಟುಂಬಗಳ ಒಪ್ಪಿಗೆ
ಪಡೆದು, ಹೈದರಾಬಾದ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ೨೦೨೬ ರ ಫೆಬ್ರವರಿಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, “ಗೀತಾ ಗೋವಿಂದA” ಚಿತ್ರದ ಮೂಲಕ ತೆರೆಯ ಮೇಲೆ ಮೋಡಿ ಮಾಡಿದ್ದು, ನಿಜ ಜೀವನದಲ್ಲೂ ಅದನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಇನ್ನು ಇತ್ತೀಚೆಗೆ ಹೈದರಾಬಾದ್ನಲ್ಲಿ ಎಂಗೇಜ್ ಆಗಿರುವ ಈ ಸ್ಟಾರ್ ನಟ-ನಟಿಗೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್ವುಡ್ನ ಹಲವು ಸ್ಟಾರ್ಸ್ಗಳು ಶುಭ ಹಾರೈಸಿದ್ದು, ಮುಂದಿನ ವರ್ಷ ಈ ಜೋಡಿ ಅಧಿಕೃತವಾಗಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ.
“ಸದ್ದಿಲ್ಲದೆ ಎಂಗೇಜ್ ಆದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ”
