ದೇವನಹಳ್ಳಿ: ಮೇಲುಕೋಟೆಯ ನಂತರ ಬೆಲೆ ಕಟ್ಟಲಾಗದ ಅಪಾರ ಆಭರಣ ಹೊಂದಿರುವ ವೇಣುಗೋಪಾಲಸ್ವಾಮಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ರತ್ನ ಖಚಿತ ವಜ್ರಾಭರಣ ವೇಣುಗೋಪಾಲ ಸ್ವಾಮಿ ಬ್ರಹ್ಮ ರಥೋತ್ಸವ ಮತ್ತು ದೇವರ ಮೆರವಣಿಗೆ ನಡೆಯಿತು.
ದೇವನಹಳ್ಳಿ ಪಟ್ಟಣದಲ್ಲಿರುವ ಕೋಟೆ ಶ್ರೀ ವೇಣುಗೋಪಾಲ ಸ್ವಾಮಿ ರಥೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಆಹಾರ ಮತ್ತು ನಾಗರಿಕ ಸಚಿವರಾದ ಕೆ.ಎಚ್ ಮುನಿಯಪ್ಪ ಚಾಲನೆ ನೀಡಿದರು.
ರಥೋತ್ಸವ ಮಧ್ಯಾಹ್ನ 1.30 ರಿಂದ 2.30ಗಂಟೆವರಗೆ ನಡೆಯಿತು. ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಲಂಕರಿಸಲಾಯಿತು. ಉತ್ಸವ ಮೂರ್ತಿಯನ್ನು ದೇವ ಸ್ಥಾನದ ಸುತ್ತ ಮೆರವಣಿಗೆ ನಡೆಸಿ, ರಥಕ್ಕೆ ತಂದು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಲಾಯಿತು.
ಬಳಿಕ ಭಕ್ತರು ರಥವನ್ನು ದೇವಸ್ಥಾನದ ಹೊರಭಾಗದ ಸುತ್ತ ಜಯ ಘೋಷ ಕೂಗಿ ರಥ ಎಳೆದು, ತೇರಿಗೆ ದವನ ಬಾಳೆಹಣ್ಣು ಅರ್ಪಿಸಿ ಭಕ್ತರಿಂದ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಮಾಡಿದ ಭಕ್ತಾದಿಗಳು ಉರಿ ಬಿಸಿಲಿನ ನಡುವೆ ರಥೋತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಪಟ್ಟಣದ ವೇಣುಗೋಪಾಲಸ್ವಾಮಿ ಜಾತ್ರೆ ಪ್ರಯುಕ್ತ ದೇವನಹಳ್ಳಿ ಟೌನಲ್ಲಿ ಪಾರ್ಕ್ ರಸ್ತೆಯಲ್ಲಿರುವ ಅಣ್ಣಯ್ಯಪ್ಪ ಛತ್ರದಲ್ಲಿ ಅನ್ನ ಸಂತರ್ಪಣೆ ಸಚಿವರು ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು ಹಾಗೂ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ರಾಜರ ಕಾಲದ ರತ್ನ ಖಚಿತ ವಜ್ರ ಜಾಗೂ ಚಿನ್ನಾಭರಣ ಹಾಕಿ ಉತ್ಸವವಾಗಿದ್ದು, ಸರ್ಕಾರದ ಖಜಾನೆಯಿಂದ ವಜ್ರಾಭರಣ ತಂದು ವರ್ಷಕ್ಕೊಮ್ಮೆ ನಡೆಯುವ ವಜ್ರಾಭರಣ ಜಾತ್ರೆ ಒಂದು ಗಂಟೆಗೂ ಅಧಿಕ ಕಾಲ ವಜ್ರಾಭರಣಗಳನ್ನ ಹಾಕಿ ದೇವರ ಮೆರವಣಿಗೆ ಮಾಡಲಾಗುತ್ತದೆ, ಮಲ್ಲಬೈರೆಗೌಡರ ಕಾಲದಲ್ಲಿ ದೇವರಿಗೆ ನೀಡಿದ್ದ ಅತ್ಯಮೂಲ್ಯ ಬೆಲೆ ಕಟ್ಟಲಾಗದ ವಜ್ರಾ ಆಭರಣಗಳು ಇದಾಗಿದ್ದುಜಾತ್ರೆ ದಿನ ಮಾತ್ರ ಉತ್ಸವ ಮೂರ್ತಿಗೆ ವಜ್ರ, ಬಂಗಾರ ಹಾಗೂ ಬೆಳ್ಳಿ ಕಿರೀಟದ ಜೊತೆಗೆ ಆಭರಣ ಹಾಕಿ ಉತ್ಸವ ಮಾಡಲಾಗುತ್ತದೆ, ವಜ್ರಾಭರಣ ಉತ್ಸವ ನೋಡಲು ಸೇರಿದ ಸಾವಿರಾರು ಜನ ಭಕ್ತರು, ಪಟ್ಟಣದ ಮುಖಂಡರು ಕಾರ್ಯಕರ್ತರು ಸಾರ್ವಜನಿಕರ ಭಕ್ತಾದಿಗಳು ಭಾಗಿಯಾಗಿದ್ದರು.