ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ-20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಸ್ಪಿನ್ನರ್ ರವಿ ಬಿಷ್ಣೋಯ್ ವಿಶ್ವದ ನಂ.1 ಟಿ-20 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಬಿಷ್ಣೋಯ್ ಅವರು ಅಫ್ಘಾನಿಸ್ತಾನದ ರಶೀದ್ ಖಾನ್ ಅವರನ್ನು ಅಗ್ರಸ್ಥಾನದಿಂದ ಹಿಂದಿಕ್ಕಿದ್ದಾರೆ.
ಏತನ್ಮಧ್ಯೆ, ಋತುರಾಜ್ ಗಾಯಕ್ವಾಡ್ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಗಾಯಕ್ವಾಡ್ ಮತ್ತು ಬಿಷ್ಣೋಯ್ ಈ ಹಿಂದೆ ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಗಳ ಶ್ರೇಯಾಂಕದಲ್ಲಿ ಅಗ್ರ 10ರಲ್ಲಿದ್ದರು ಮತ್ತು ಐಸಿಸಿ ವೆಬ್ಸೈಟ್ ಇತ್ತೀಚಿನ ನವೀಕರಣದ ಪ್ರಕಾರ, ಬಿಷ್ಣೋಯ್ 699 ರೇಟಿಂಗ್ ಅಂಕಗಳೊಂದಿಗೆ ಹೊಸ ನಂ.1 ಟಿ-20 ಬೌಲರ್ ಆಗಿದ್ದಾರೆ.
ಇತ್ತೀಚಿನ ನವೀಕರಣಕ್ಕೆ ಮೊದಲು ಅವರು 665 ರೇಟಿಂಗ್ ಗಳೊಂದಿಗೆ 5 ನೇ ಸ್ಥಾನದಲ್ಲಿದ್ದರು. ಗಾಯಕ್ವಾಡ್ ಇತ್ತೀಚೆಗೆ ಅಗ್ರ 10ರೊಳಗೆ ಪ್ರವೇಶಿಸಿದರು ಮತ್ತು ಆ ಸಾಧನೆಯನ್ನು ಉಳಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಅವರು ಪ್ರಸ್ತುತ ವಿಶ್ವದ ನಂ.7 ಟಿ 20 ಬ್ಯಾಟ್ಸ್ಮನ್ ಆಗಿದ್ದಾರೆ.