ಸಾಮಾಜಿಕ ಚಿಂತನೆಯ ಕಾಯಕಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ, ಸೃಜನಶೀಲ ಧಾರ್ಮಿಕ ಆರೋಗ್ಯ ಚಿಂತಕ, ಲಯನ್ಡಾ .ಬಿ.ಎಂ.ರವಿನಾಯ್ಡುರವರ ಸಾಧನೆ, ಇಂದಿನ ಯುವ ಸಮುದಾಯಕ್ಕೆ ಸ್ಪೂರ್ತಿ ಎಂದು ಲಯನ್ ಗೌರ್ನರ್ ಬಿ.ಎಸ್.ನಾಗರಾಜ್ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಅವಲಕೊಂಡರಾಯನಹಳ್ಳಯಲ್ಲಿ 12ಎಕರೆ ಜಮೀನಿನಲ್ಲಿ 25ಲಕ್ಷದ ವೆಚ್ಚದಲ್ಲಿ ಸಾರ್ವಜನಿಕ ರೈತರ ಅನುಕೂಲಕ್ಕಾಗಿ 10ಅಡಿಗಳ ವಿಸ್ತೀರ್ಣ ಸುಮಾರು 1200ಅಡಿಗಳ ಉದ್ದದ ನೀರಿನ ಕಾಲುವೆ ನಿರ್ಮಾಣದಿಂದ ಸಮೀಪವಿರುವ ಕೆರೆ ಅಭಿವೃದ್ದಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಲಯನ್ ಬಿ.ಎಸ್.ನಾಗರಾಜ್ ರವರು ಮಾತನಾಡುತ್ತಾ ರವಿನಾಯ್ಡುರವರ ಕುಟುಂಬದವರು ಸ್ವಂತ ಖರ್ಚಿನಿಂದಲಯನ್ ಸಂಸ್ಥೆ 317ಈ ವತಿಯಿಂದ ಹಮ್ಮಿಕೊಂಡ ಈ ನೀರಾವರಿ ಅಭಿವೃದ್ದಿ ಕಾರ್ಯಕ್ರಮದ ಬಗ್ಗೆ ತುಂಬು ಹೃದಯದಿಂದ ಅಭಿನಂದಿಸಿದರು,
ಇದೇ ಸಂದರ್ಭದಲ್ಲಿ ಅವಲಕೊಂಡರಾಯನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಧ್ವನಿವರ್ಧಕ ನೀಡಿದರು ಹಾಗೂ ಶ್ರೀರಾಮ ದೇವಸ್ಥಾನಕ್ಕೆ 1ಲಕ್ಷ ರೂಪಾಯಿಗಳ ದೇಣಿಗೆ ನೀಡಿದರು, ಅತೀ ಹಿಂದುಳಿದ ಬಡಕುಟುಂಬದವರಿಗೆ ಸೀರೆಗಳು ಹಾಗು ದವಸ – ದಾನ್ಯಗಳನ್ನು ವಿತರಿಸಿದರು, ಸಮಾರಂಭದಲ್ಲಿ ಲಯನ್ ರವೀಂದ್ರ, ಪ್ರಗತಿಪರ ವಕೀಲರಾದ ಲಯನ್ ರಮೇಶ್, ಲಯನ್ ಮಂಜುಳ,ಶಿಲ್ಪಾಭರತ್, ಡಿ.ಸಿ. ವಿಷನ್ ಲೀಲಾಕೃಷ್ಣ , ವಿಜಯಾನಂದ ಬಾಬನಗರ್, ವಿಜಯಕುಮಾರ್, ಸಿ.ಎಂ. ನಾರಾಯಣಸ್ವಾಮಿ, ಲ್ಯಾಬ್ ನಾಗರಾಜ್, ಸಂಜೀವಪ್ಪ, ಬಸಂತ್ ಗೌಡ ಇತರರಿದ್ದರು.
ಚಿತ್ರ:ಜಿ.ಎಲ್.ಸಂಪಂಗಿ ರಾಮುಲು