ಡಾ||ರಾಜ್ ಕುಮಾರ್ ಗಾಜಿನಮನೆ ಅವರಣದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧಕಿಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರೇಕ್ಷಕರನ್ನು ರಂಜಿಸಿದ ರವಿಚಂದ್ರನ್, ಮಾಲಾಶ್ರೀ ನೃತ್ಯ.
ವಿ.ರವಿಚಂದ್ರನ್ ಮಾತನಾಡಿ, ಹೆಣ್ಣು ಸ್ಪೂರ್ತಿ ಅವಳು ಇಲ್ಲದೇ ಹೋದರೆ ಜೀವನ ವ್ಯರ್ಥ. ಹೆಣ್ಣು ಇಲ್ಲವೆಂದರೆ ಸಮಾಜದಲ್ಲಿ ಏನು ಇಲ್ಲ, ಪುರುಷರಗಿಂತ ಮಹಿಳೆಯರೇ ಹೆಚ್ಚು ಶಕ್ತಿಶಾಲಿಗಳು. ನನ್ನ ತಾಯಿಯ ಜೊತೆಯಲ್ಲಿ ಆತ್ಮೀಯ ಒಡನಾಟದಿಂದ ನನಗೆ ಮಹಿಳೆಯರಿಗೆ ಬಗ್ಗೆ ಹೆಚ್ಚು ಗೌರವ ಮೂಡುವಂತೆ ಮಾಡಿತು.
ನಾವು ಎಷ್ಟೆ ಡೊಡ್ಡವರಾದರು, ತಾಯಿಗೆ ನಮ್ಮ ಚಿಕ್ಕ ಮಕ್ಕಳಾಗಿ ಇರುತ್ತೇವೆ. ಅಭಿಮಾನಗಳ ಜನರ ಕಣ್ಣಿನಲ್ಲಿರುವ ಪ್ರೀತಿ ನೋಡಿದರೆ ನನ್ನ ತಂದೆ, ತಾಯಿಯ ನೆನಪಾಗುತ್ತಾರೆ. ನಾನು ಮನೆಯಿಂದ ಹೋರ ಹೋಗಬೇಕಾದರೆ ಹೆಂಡತಿ ಅಥವಾ ಮಗಳು ಮುಖ ನೋಡಿಕೊಂಡು ಮುಂದಿನ ಕಾರ್ಯರಂಭವಾಗುತ್ತದೆ ನನ್ನದು. ಮಹಿಳೆಯರು ಕಷ್ಟ,ಆಳು ದುಖಃ ಹಂಚಿಕೊಳ್ಳುವುದಿಲ್ಲ, ನಗುವು ಮೂಲಕ ಎಲ್ಲರ ಮನಸ್ಸನ ಗೆಲ್ಲುತ್ತಾರೆ.
ಡಾ.ರಾಜ್ ಕುಮಾರ್, ಅಂಬರೀಷ್, ಶಿವಣ್ಣ, ಪುನೀತ್ ರಾಜ್ ಕುಮಾರ್ ಒಡನಾಟದಿಂದ ಚಲನಚಿತ್ರರಂಗದಲ್ಲಿ ಬೆಳೆಯಲು ಸಾಧ್ಯವಾಯಿತು.ಪ್ರೇಮಲೋಕ ಭಾಗ-2ಶೀಘ್ರದಲ್ಲಿ ಆರಂಭವಾಗಲಿದೆ.ಜೀವನದಲ್ಲಿ ಜನರ ಪ್ರೀತಿ ಇದ್ದರೆ ಸಾಕು ಜೀವನ ಗೆದ್ದಂತೆ ಎಂದು ಹೇಳಿದರು.
ಮಾಲಾಶ್ರೀ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೆ ಸಾಧನೆ ಮಾಡುತ್ತಾರೆ, ಹೆಣ್ಣು ಮಕ್ಕಳು ಜೀವನದ ಸ್ಪೂರ್ತಿಯಾಗಿದ್ದಾರೆ.ಮಹಿಳೆಯರು ಸಮಾಜದ ಕಣ್ಣು ಮತ್ತು ಮಹಿಳೆಯರಿಗೆ ಗೌರವ ಕೊಟ್ಟರೆ ದೇವರೆ ಒಲಿಯುತ್ತಾನೆ ಎಂದು ಪುರಾಣದಲ್ಲಿ ಹೇಳುತ್ತಾರೆ.
ಎ.ಅಮೃತ್ ರಾಜ್ ಮಾತನಾಡಿ, ಮಹಿಳೆ ತಾಯಿಯಾಗಿ, ಅಕ್ಕ,ತಂಗಿ ವಿವಿಧ ರೂಪದಲ್ಲಿ ಇಡಿ ಕುಟುಂಬವನ್ನು ಸಲುಹುವಳು. ಮಹಿಳೆ ಅಬಲೆಯಲ್ಲ ಸಬಲೆ ಎಂದು ರೂಪಿಸಿದ್ದಾರೆ.ಚಲನಚಿತ್ರ, ನಾಟಕ, ಸಾಹಿತ್ಯ, ಕಲೆ ರಾಜಕೀಯ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಿ ತೋರಿಸಿದ್ದಾರೆ.
ಕುಟುಂಬ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಮಹಿಳೆಯರ ಪ್ರಮುಖ ಪಾತ್ರವಹಿಸಿದ್ದಾರೆ ಅಂತಹ ಸಾಧಕ ಮಹಿಳೆಯರಿಗೆ ಗೌರವಿಸುವ ಶುಭಾ ದಿನವೆ ವಿಶ್ವ ಮಹಿಳಾ ದಿನಾಚರಣೆ ಎಂದರು.