This is the title of the web page
This is the title of the web page

ಶಿಡ್ಲಘಟ್ಟ ಅಭಿವೃದ್ಧಿಗಾಗಿ ಉದಯಿಸಿದ ರವಿಕುಮಾರ್

ಶಿಡ್ಲಘಟ್ಟ: “ನಿರಂತರವಾಗಿ ನಾಲ್ಕು ಚುನಾವಣೆಗಳನ್ನು ನಡೆಸಿದ ನನಗೆ ನೋವು ಸಾಮಾನ್ಯ. ಆದರೆ ಪಕ್ಷದ ಕಾರ್ಯಕರ್ತರಿಗೆ ನೋವಾದಾಗ ನನ್ನಿಂದ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ” ಎಂದು ಜೆಡಿಎಸ್ ಕಾರ್ಯಕರ್ತರ ಬೃಹತ್ ಬಹಿರಂಗ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮುಂದೆ ನೋವು ತೋಡಿಕೊಂಡಿದ್ದ ಜೆಡಿಎಸ್ ಅಭ್ಯರ್ಥಿ ಮೇಲೂರು ಬಿ. ಎನ್. ರವಿಕುಮಾರ್ ಗೆಲುವಿನ ನಗೆ ಬಿರಿದ್ದಾರೆ.

ಕಳೆದ ಬಾರಿ ಗೆಲುವಿನ ಸಮೀಪ ಬಂದಿದ್ದ ಅವರಿಗೆ ಸೋಲಾಗಿತ್ತು. ಜೆಡಿಎಸ್ ಪಕ್ಷವನ್ನು 4 ಚುನಾವಣೆಗಳಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಅವರು ಬೆಳೆಸಲು ತಮ್ಮ ತನುಮನ ಧನ ಅರ್ಪಿಸಿದ್ದರು. ಆದರೆ ಪಕ್ಷದ ಅಭ್ಯರ್ಥಿಯಾಗಿ ಗೆದ್ದವರು ಇವರನ್ನು ಕಡೆಗಣಿಸಿದ್ದರಿಂದ ರವಿಕುಮಾರ್ ತಾವೇ ಅಭ್ಯರ್ಥಿಯಾಗಿ ಕಳೆದ ಬಾರಿ ಕಣಕ್ಕೆ ಇಳಿದಿದ್ದರು.

ಕೂದಲೆಳೆಯಲ್ಲಿ ಗೆಲುವಿನಿಂದ ವಂಚಿತರಾಗಿದ್ದರು. ಶಿಡ್ಲಘಟ್ಟ ನಗರದ ಅಭಿವೃದ್ಧಿಗೆ ನಗರಸಭೆ ಅಧ್ಯಕ್ಷ ಸ್ಥಾನದಲ್ಲಿ ತಮ್ಮ ಬೆಂಬಲಿತ ಮಹಿಳಾ ಅಭ್ಯರ್ಥಿಯನ್ನು ಕೂರಿಸುವಲ್ಲಿ ರವಿಕುಮಾರ್ ಯಶಸ್ವಿಯಾಗಿದ್ದರು. ಇವರಿಗೆ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸುಲಭ ಎಂಬ ಪರಿಸ್ಥಿತಿ ಇತ್ತು.

ಆದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದ ಹಾಲಿ ಶಾಸಕ ವಿ .ಮುನಿಯಪ್ಪ ಅವರು ಈ ಬಾರಿ ಅವರ ಮಗನನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿಸುತ್ತಾರೆ ಎಂಬ ವಿಷಯ ಸ್ವಲ್ಪ ಮಟ್ಟಿನ ತೊಡಕು ಆಗಿತ್ತು. ಆದರೆ ಎಬಿಡಿ ಸಂಸ್ಥೆಯ ರಾಜೀವ್ ಗೌಡ ಮತ್ತು ಎಸ್‍ಎನ್ ಕ್ರಿಯಾ ಟ್ರಸ್ಟ್ ಪುಟ್ಟು ಅಂಜನಪ್ಪ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ಕಠಿಣ ಸವಾಲಾಗಿತ್ತು.

ಬದಲಾದ ಪರಿಸ್ಥಿತಿಯಲ್ಲಿ ರಾಜೀವ್ ಗೌಡ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ದೊರೆತಿತ್ತು. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರಾದ ಪುಟ್ಟು ಆಂಜನಪ್ಪ ಪಕ್ಷೇತರರಾಗಿ ಚುನಾವಣಾ ಕಣದಲ್ಲಿ ಉಳಿದಿದ್ದರು. ಅವರಿಂದ ತೀವ್ರ ಸ್ಪರ್ಧೆಯನ್ನು ರವಿಕುಮಾರ್ ಅವರು ಎದುರಿಸಿದ್ದಾರೆ.

ಬಿಜೆಪಿ ಪಕ್ಷದಿಂದ ಉದ್ಯಮಿ ರಾಮಚಂದ್ರಗೌಡ ಅವರು ಸಾಕಷ್ಟು ತರಬೇತಿ ಜೊತೆಗೆ ಪಕ್ಷ ಸೇರ್ಪಡೆ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿದರು. ಅವರಿಗೆ ಗೆಲುವಿನ ಗೆರೆಯೂ ಸಹ ಕಾಣದಂತೆ ಅವರು ಯಾರನ್ನು ಅತಿಯಾಗಿ ನಂಬಿದ್ದರೋ ಅವರೇ ಮಾಡಿದರು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಂತೂ “ ಇಂದು ಸಂಜೆ” ಪತ್ರಿಕೆ ವಿಶ್ಲೇಷಣೆಯಂತೆ ಕಾಂಗ್ರೆಸ್ ಅಭ್ಯರ್ಥಿಗೆ ಮೂರನೇ ಸ್ಥಾನ.