ಬೆಂಗಳೂರು: ಬೆಂಗಳೂರಿನ ಚಿನ್ನಾಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯವಾಡಲು ಆರ್ಸಿಬಿ ತಂಡ ಕೆಲವು ಷರತ್ತು ವಿಧಿಸಿದೆ. ೨೮ರಂದು ಐಪಿಎಲ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಲಿದೆ. ಆ ವೇಳೆಗೆ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ತಂಡ ಆಡುವುದು ನಿರ್ಣಯವಾಗಬೇಕಿದೆ.
ತನ್ನ ಮೇಲಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಆರ್ಸಿಬಿ ತಂಡ ಕೆಎಸ್ಸಿಎಗೆ ಷರತ್ತು ವಿಧಿಸಿದೆ. ಈ ವಿಷಯವನ್ನು ಸರ್ಕಾರದ ಮುಂದೆ ನೀವೇ ಮಾತನಾಡಿ ಎಂದು ಕೆಎಸ್ಸಿಎಗೆ ತಿಳಿಸಿದೆ.
ಈಗಾಗಲೇ ಆರ್ಸಿಬಿ
ತಂಡದ ಉಪಾಧ್ಯಕ್ಷರಾಗಿರುವ ರಾಜ್ಮೆನನ್ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಈ ಪ್ರಕರಣ ಏನಾದರೂ ವಿಚಾರಣೆ ನಡೆದು ಅವರ ವಿರುದ್ಧವಾಗಿ ತೀರ್ಪು ಹೊರ ಬಿದ್ದರೆ ವಿಧೇಯಗಳ ಪ್ರಕಾರ ೧೦ ವರ್ಷ ಶಿಕ್ಷೆಯಾಗಲಿದೆ. ಹಾಗಾಗಿ ಪ್ರಕರಣವನ್ನು ರದ್ದುಗೊಳಿಸಲು ಆರ್ಸಿಬಿ ಕೆಎಸ್ಸಿಎಗೆ ಷರತ್ತು ವಿಧಿಸಿದೆ. ಆದರೆ ಇದನ್ನು ನೀವೇ ಸರ್ಕಾರದ ಮಟ್ಟದಲ್ಲಿ ಬಗೆಹರಿಸಿಕೊಳ್ಳಿ ಎಂದು ಕೆಎಸ್ಸಿಎ ಆರ್ಸಿಬಿಗೆ ತಿಳಿಸಿದೆ. ಹೀಗಾಗಿ ೨೮ರೊಳಗಾಗಿ ಈ ವಿಷಯ ಇತ್ಯಾರ್ಥವಾಗಿ ಆರ್ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಡುವುದು ಇಲ್ಲವೂ ಎಂಬ ಜಿಜ್ಞಾಸೆ ಕಾಡುತ್ತಿದೆ.



