ಮುಂಬಯಿ: ಚೊಚ್ಚಲ ವನಿತಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗಾಗಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಮುಂಬಯಿಗೆ ಆಗಮಿಸಿದೆ. ಇದಕ್ಕೂ ಮೊದಲು ತಂಡದ ಸದಸ್ಯರೆಲ್ಲ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಆರ್‍ಸಿಬಿ ತನ್ನ ಅಧಿಕೃತ ಟ್ವಿಟರ್‍ನಲ್ಲಿ ಮುಂಬಯಿಗೆ ಆಗಮಿಸಿದ ಬಗ್ಗೆ ಮಾಹಿತಿ ನೀಡಿದೆ. ಚಿತ್ರಗಳನ್ನೂ ಹಂಚಿಕೊಂಡಿದೆ.
ಬಂದು ತಲುಪಿದ್ದೇವೆ. ನಮಸ್ಕಾರ ಮುಂಬಯಿ ಎಂದು ಬರೆದುಕೊಂಡಿದೆ. ಸ್ಮತಿ ಮಂಧನಾ ನಾಯಕತ್ವವನ್ನು ಹೊಂದಿರುವ ಆರ್‍ಸಿಬಿ ತಂಡ ರವಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ.
Leave a Review