ಇದು ಆಧುನಿಕ ಬೆಂಗಳೂರಿನ ಅಪಾರ್ಟ್ಮೆಂಟ್ಸ್ ಸಂಸ್ಕೃತಿಯ ಹಿನ್ನಲೆಯಲ್ಲಿ ನಡೆಯುವ ರೋಚಕ ಸಸ್ಪೆನ್ಸ್ ಥ್ರಿಲ್ಲರ್ ಕಥೆ.ವೈಮನಸ್ಯದಿಂದ ವಿಚ್ಛೇದನ ಪಡೆಯಲು ಬಯಸುವ ಅಮೃತ್ ಅಪಾರ್ಟ್ಮೆಂಟ್ಸ್ ನಿವಾಸಿ-ದಂಪತಿಗಳ ಬದುಕಿನಲ್ಲಿ ಊಹಿಸಲಾರದ ಘಟನೆಯೊಂದು ನಡೆಯುತ್ತದೆ.
ನಂತರ ಅವರ ಬದುಕಿನಲ್ಲಾಗುವ ತಿರುವುಗಳನ್ನು ನೀವು ಚಿತ್ರದಲ್ಲಿ ನೋಡಬೇಕು. ಕೆಜಿಎಫ್ ಖ್ಯಾತಿಯ ತಾರಕ್ ಪೊನ್ನಪ್ಪ, ಊರ್ವಶಿ ಗೋವರ್ಧನ್, ಬಾಲಾಜಿ ಮನೋಹರ್, ಸೀತಾ ಕೋಟೆ ಮತ್ತು ಕವಲುದಾರಿ ಖ್ಯಾತಿಯ ಸಂಪತ್ ಕುಮಾರ್ ತಾರಗಣದಲ್ಲಿ ಮಿಂಚಿದ್ದಾರೆ.
ಬಿಡುಗಡೆಗೊಂಡಾಗ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿದ್ದ “ಅಮೃತ್ ಅಪಾರ್ಟ್ಮೆಂಟ್ಸ್” ಚಿತ್ರ, ಇದೀಗ G9 CME ಯೂಟ್ಯೂಬ್ ನಲ್ಲಿ ಮಾರ್ಚ್ 23 ರಿಂದ ಲಭ್ಯವಿರುತ್ತದೆ.ವೀಕ್ಷಿಸಲು ಮತ್ತು ಗುರುರಾಜ ಕುಲಕರ್ಣಿ ಅವರ ಬರಹ ಹಾಗೂ ನಿರ್ದೇಶನದಲ್ಲಿ ಬರಲಿರುವ, ಬಹು ತಾರಾಗಣದ, ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ನಾಯಕ ನಟರಾಗಿರುವ “ದ ಜಡ್ಜ್ ಮೆಂಟ್” ಚಿತ್ರ ಸಾಮಾಜಿಕ ಜಾಲತಾಣದಲ್ಲಿದೆ.