ಬೇಲೂರು. ಬೇಲೂರು ನಗರದ ಹೊರ ವಲಯದಲ್ಲಿರುವ ವೈಡಿಡಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಐ.ಕ್ಯು.ಎ.ಸಿ., ಯುವ ರೆಡ್ ಕ್ರಾಸ್ ಘಟಕ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೇಲೂರು ವತಿಯಿಂದ ಹಮ್ಮಿಕೊಂಡ ವಿಶ್ವ ಆರೋಗ್ಯ ದಿನ ಮತ್ತು ವಿಶ್ವ ಕ್ಷಯ ರೋಗ ದಿನದ” ಅಂಗವಾಗಿ ಪ್ರಸ್ತುತ ಹದಿಹರೆಯದ ವಿದ್ಯಾರ್ಥಿಗಳ ಆರೋಗ್ಯದ ಸ್ಥಿತಿಗತಿಗಳು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟನೆ ನಡೆಸಿದರು.
ವೈಡಿಡಿ ಕಾಲೇಜು ಸಮಿತಿ ಸದಸ್ಯ ಗಿರಿಯಪ್ಪಶೆಟ್ಟಿ ಮಾತನಾಡಿ, ಇತ್ತೀಚಿನ ದಿನದಂದು ಯುವ ಜನಾಂಗದಲ್ಲಿ ದುಶ್ವಟಗಳ ಸಹವಾಸದಿಂದ ಯುವಕರ ಆರೋಗ್ಯದ ಮೇಲೆ ಕೆಟ್ಟು ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಯುವ ಸಮುದಾಯದ ತಮ್ಮ ಆರೋಗ್ಯದ ಸದೃಢತೆಗೆ ಹೆಚ್ಚಿನ
ಗಮನ ನೀಡಬೇಕು ಎಂದ ಅವರು ವೈಡಿಡಿ ಕಾಲೇಜು ಇತ್ತೀಚಿನ ದಿನದಂದು ಉತ್ತಮ ಶಿಕ್ಷಣದ ಜೊತೆಗೆ ಸಾಂಸ್ಕöÈತಿಕ ಮತ್ತು
ಕ್ರೀಡಾ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇಂದು ಉತ್ತಮ ಕಾರ್ಯಕ್ರಮ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೇಲೂರು ಆರೋಗ್ಯ ಇಲಾಖೆ ಶಿಕ್ಷಣಾಧಿಕಾರಿ ಉಷಾ ಪೂರ್ಣೆಶ್ ಮಾತನಾಡಿ, ಹದಿಹರೆಯದವರ ಆರೋಗ್ಯವು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬದಲಾವಣೆಗಳ ನಿರ್ಣಾಯಕ ಹಂತವಾಗಿದೆ. ಪೌಷ್ಟಿಕ ಆಹಾರ, ವ್ಯಾಯಾಮ, ಮತ್ತು ಭಾವನಾತ್ಮಕ ಬೆಂಬಲದೊಂದಿಗೆ, ಖಿನ್ನತೆ, ಆತಂಕ, ಮತ್ತು ಅಪೌಷ್ಟಿಕತೆಯಂತಹ ಅಪಾಯಗಳನ್ನು ತಡೆಗಟ್ಟಬಹುದು. ಆರೋಗ್ಯಕರ ಜೀವನಶೈಲಿ, ಸಕಾಲಿಕ ಲಸಿಕೆ ಮತ್ತು ಮುಕ್ತ ಸಂವಹನವು ಈ ವಯಸ್ಸಿನ ಸಮಗ್ರ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಯುವ ಜನಾಂಗ ಉದಾಸೀನದಿಂದ ಹೊರ ಬಂದು ಆರೋಗ್ಯದ ಮೇಲೆ ನಿಗ ವಹಿಸಿ ಎಂದು ಕರೆ ನೀಡಿದರು.
ಭಾರತೀಯ ರೆಡ್ ಕ್ರಾಸ್ ಬೇಲೂರು ತಾಲ್ಲೂಕು ಘಟಕದ ಸಭಾಪತಿ ವೈ.ಎಸ್.ಸಿದ್ದೇಗೌಡ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಜಿನೀವಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಒಂದು ಸ್ವತಂತ್ರ, ತಟಸ್ಥ ಮಾನವೀಯ ಸಂಸ್ಥೆಯಾಗಿದೆ. 1863 ರಲ್ಲಿ ಸ್ಥಾಪಿತವಾದ ಇದು, ಯುದ್ಧ ಮತ್ತು ವಿಪತ್ತುಗಳ ಸಂದರ್ಭದಲ್ಲಿ ಗಾಯಗೊಂಡ ಸೈನಿಕರು, ನಿರಾಶ್ರಿತರು ಮತ್ತು ನಾಗರಿಕರ ರಕ್ಷಣೆ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಇದು ಜಾಗತಿಕವಾಗಿ ಅತಿದೊಡ್ಡ ಸ್ವಯಂಸೇವಕ ನೆಟ್ವರ್ಕ್ ಹೊಂದಿದ್ದು ಬೇಲೂರು ತಾಲ್ಲೂಕು ಘಟಕ ಪ್ರಸಕ್ತ ಹಾಲಿನಲ್ಲಿ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ತಿಳಿಸಿದರು.
ವೈ ಡಿ ಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಮಹೇಶ್ ಮಾತನಾಡಿ,ಕಾಲೇಜು ವಿದ್ಯಾರ್ಥಿಗಳಲ್ಲಿ ಆರೋಗ್ಯವು ಮುಖ್ಯವಾಗಿ ದೀರ್ಘಕಾಲದ ಒತ್ತಡ, ಆತಂಕ, ಖಿನ್ನತೆ ಮತ್ತು ನಿದ್ರೆಯ ಕೊರತೆಯಿಂದಾಗಿ ಹದಗೆಡುತ್ತಿದೆ, ಇದು ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸಮರ್ಪಕ ನಿದ್ರೆ, ಪೌಷ್ಟಿಕ ಆಹಾರ, ನಿಯಮಿತ ದೈಹಿಕ ಚಟುವಟಿಕೆ ಮತ್ತು ಮಾನಸಿಕ ಆರೋಗ್ಯ ಸಂಪನ್ಮೂಲಗಳ ಬಳಕೆ ಈ ಸಮಸ್ಯೆಗಳನ್ನು ಕಡಿಮೆ ಮಾಡಲು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗೆಂಡೇಹಳ್ಳಿ ಆರೋಗ್ಯ ವೈದ್ಯಾಧಿಕಾರಿ ಡಾ.ಶ್ವೇತ, ಭಾರತೀಯ ರೆಡ್ ಕ್ರಾಸ್ ಬೇಲೂರು ಘಟಕದ ಕಾರ್ಯದರ್ಶಿ ಧನಂಜಯ, ನವೀನ್ ಕುಮಾರ್ ಹರ್ಷಿತ ಸಂಸ್ಥೆ, ಹಾಸನ ಜಿಲ್ಲಾ ಸಂಯೋಜಕರು ಹಾಗೂ ಶ್ರೀ ಮಂಜುನಾಥ ಎಸ್ ಪಿ. ಸಂಚಾಲಕರು ಯುವ ರೆಡ್ ಕ್ರಾಸ್ ಘಟಕ. ವೈ.ಡಿ.ಡಿ.ಸ.ಪ್ರ.ದ ಕಾ.ಬೇಲೂರು, ಕಲಾವತಿ ಮಧುಸೂದನ್, ಆಶಾಕಿರಣ್ ಹಾಜರಿದ್ದರು.
ರೆಡ್ ಕ್ರಾಸ್ ಸಂಸ್ಥೆಯಿAದ ವಿಶ್ವ ಆರೋಗ್ಯ ದಿನಾಚರಣೆ”



