ರೆಡ್ಡಿ ಮನೆ ಆವರಣದಲ್ಲಿ ದೊಣ್ಣೆ ರಾಶಿ ಪತ್ತೆ | ಬಾಂಬ್ ನಿಷ್ಕಿçಯ ದಳದಿಂದ ಶೋಧ
ಬಳ್ಳಾರಿ/ಬೆಂಗಳೂರು; ಈ ತಿಂಗಳ ೧ನೇ ತಾರೀಖು ಬಳ್ಳಾರಿಯಲ್ಲಿ ನಡೆದ ಗಲಭೆಗೆ ಸಂಬAಧಪಟ್ಟAತೆ ಮಾಜಿ ಸಚಿವ ಜನಾರ್ದನರೆಡ್ಡಿ ಮತ್ತು ಅವರ ಆಪ್ತರು ಸಜ್ಜಾಗಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬAತೆ ಗಲಭೆ ನಡೆದ ಜನಾರ್ದನರೆಡ್ಡಿ ಮನೆ ಆವರಣದಲ್ಲಿ ದೊಣ್ಣೆ ರಾಶಿ ಪತ್ತೆಯಾಗಿದೆ.
ಜನಾರ್ದನರೆಡ್ಡಿ ಮತ್ತು ಸಚಿವ ಶ್ರೀರಾಮುಲು ಆಪ್ತರು ದೊಣ್ಣೆಗಳನ್ನು ಹಿಡಿದು ಓಡಾಡುತ್ತಿದ್ದರು ಎಂದು ಹೇಳಲಾಗಿದೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ(ಬುಡಾ) ಮಾಜಿ ಅಧ್ಯಕ್ಷ ಶ್ರೀರಾಮುಲು ಆಪ್ತ ಎನ್ನಲಾದ ಪಾಲಣ್ಣ ಎಂಬಾತ ದೊಣ್ಣೆ ಹಿಡಿದು ಓಡಾಡುತ್ತಿದ್ದ ಎನ್ನಲಾಗಿದೆ.
ಇದರ ಮಧ್ಯೆ ಇಂದು ಬಾಂಬ್ ನಿಷ್ಕಿçಯ ದಳದವರು ಗುಂಡಿನ ದಾಳಿ ನಡೆದ ಜನಾರ್ದನರೆಡ್ಡಿ ಅವರ ಅಹಂಬಾವಿ, ನಿವಾಸ ಪ್ರದೇಶದಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಬಾಂಬ್ ನಿಷ್ಕಿçಯ ದಳದವರೊಂದಿಗೆ ಎಫ್ಎಸ್ಎಲ್ ತಂಡದವರು ಕೂಡ ಆಗಮಿಸಿ ಈ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಒಟ್ಟಾರೆ ಗುಂಡಿನ ಪ್ರಕರಣದ ತನಿಖಾ ಕಾರ್ಯ ಮುಂದುವರೆದಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ಹಲವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳು ಬೆಂಗಳೂರಿಗೆ
ಬೆAಗಳೂರು: ಬಳ್ಳಾರಿ ಗುಂಡಿನ ದಾಳಿ ಪ್ರಕರಣಕ್ಕೆ ಸಂಬAಧಪಟ್ಟAತೆ ಬಂಧಿಸಲಾಗಿರುವ ೨೬ ಮಂದಿ ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಾಗಿದೆ.
೨೬ ಮಂದಿಯನ್ನು ಬೆಂಗಳೂರಿಗೆ ಕರೆತಲಾಗಿದ್ದು, ಈ ಪೈಕಿ ಗುಂಡಿನ ದಾಳಿ ಪ್ರಮುಖ ಆರೋಪಿ ಎನ್ನಲಾದ ಶಾಸಕ ನಾ.ರಾ. ರೆಡ್ಡಿಯ ಆಪ್ತ ಸತೀಶ್ ರೆಡ್ಡಿ ಅಂಗರಕ್ಷಕ ಗುರುಚರಣ್ ಸಿಂಗ್ ಸೇರಿದಂತೆ ೧೦ ಮಂದಿ ಕಾಂಗ್ರೆಸ್ನವರು, ೧೫ಮಂದಿ ಬಿಜೆಪಿಯವರು ಇದ್ದಾರೆ. ಇವರನ್ನು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸುತ್ತ ೨ಕೆಎಸ್ಆರ್ಪಿ ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ರಾತ್ರಿಯೇ ಆರೋಪಿಗಳನ್ನು ಬೆಂಗಳೂರಿಗೆ ಕರೆತಂದು ಬೆಳಗ್ಗಿನಿಂದಲೇ ವಿಶೇಷ ನ್ಯಾಯಾಲಯದ ಬಳಿ ಅವರನ್ನು ಇರಿಸಲಾಗಿದೆ. ೧೧ಗಂಟೆ ಸುಮಾರಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.



