This is the title of the web page
This is the title of the web page

ರೆಹಾನೆ ಕೈ ಬೆರಳಿಗೆ ಗಾಯ

ದಿ ಓವಲ್: ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಏಕೈಕ ಆಶಾಕಿರಣವಾಗಿದ್ದ ಅಜಿಂಕ್ಯಾ ರೆಹಾನೆ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.

ರೆಹಾನೆ ಮೊದಲ ಇನಿಂಗ್ಸ್ ನಲ್ಲಿ 89 ರನ್ ಸಿಡಿಸಿ ಭಾರತದ ಮಾನ ಕಾಪಾಡಿದ್ದರು. ಅವರ ತಾಳ್ಮೆಯ ಆಟದಿಂದ ಟೀಂ ಇಂಡಿಯಾ ಫಾಲೋ ಆನ್ ಭೀತಿಯಿಂದ ಪಾರಾಗಿತ್ತು.

ಆದರೆ ಅವರಿಗೆ ಕೈ ಬೆರಳಿಗೆ ಗಾಯವಾಗಿದ್ದು, ಈ ಬಗ್ಗೆ ಮೂರನೇ ದಿನದಂತ್ಯಕ್ಕೆ ಮಾತನಾಡಿರುವ ಅವರು ‘ಬೆರಳು ನೋಯುತ್ತಿದೆ. ಹಾಗಿದ್ದರೂ ಬ್ಯಾಟಿಂಗ್ ಮಾಡಬಹುದು ಎನಿಸುತ್ತಿದೆ’ ಎಂದಿದ್ದಾರೆ. ಎರಡನೇ ಇನಿಂಗ್ಸ್ ನಲ್ಲೂ ಅವರು ಫಿಟ್ ಆಗಿ ಬ್ಯಾಟಿಂಗ್ ಮಾಡುವುದು ಭಾರತದ ಪಾಲಿಗೆ ಮುಖ್ಯವಾಗಿದೆ.