ಗುಂಡ್ಲುಪೇಟೆ : ಧರ್ಮಾಧಾರಿತ ರಾಜಕಾರಣದಿಂದ ಕೋಮು ಸೌಹಾರ್ದತೆ ಇಲ್ಲದಂತಹ ಪರಿಸ್ಥಿತಿ ದೇಶ ಮತ್ತು ರಾಜ್ಯದಲ್ಲಿ ನಿರ್ಮಾಣ ಆಗಿದೆ ಎಂದು ಮಾಜಿ ಸಚಿವರಾದ ಬಿ.ಸೋಮಶೇಖರ್ ರವರು ಹೇಳಿದರು. ಅವರು ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿಯವರು ಕೋಮುವಾದದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಾಗೂ ಧರ್ಮಾಧಾರಿತ ರಾಜಕಾರಣ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಜಾತಿ ದಳ್ಳೂರಿ, ಕೋಮು ದಳ್ಳೂರಿ ಸೃಷ್ಟಿ ಮಾಡಿ, ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಬಿಜೆಪಿ ಪಕ್ಷ ಆಡಳಿತ ಮಾಡಿದೆ. ಮೋಸ, ಸುಳ್ಳು ಹಾಗೂ ತಪ್ಪು ಮಾಹಿತಿಗಳನ್ನು ಕೊಟ್ಟು ಜನರನ್ನು ಮರುಳು ಮಾಡಿ ಸರ್ವಾಧಿಕಾರಿ ಆಡಳಿತ ನಡೆಸುತಿದೆ. ದೇಶ
ದಲ್ಲಿ ಬಡತನದ ಪ್ರಮಾಣ ಕಡಿಮೆ ಇತ್ತು.
ಪ್ರತಿವರ್ಷಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೆವೆಂದು ಭರವಸೆ ನೀಡಿದ್ದರು. ಆದರೆ ಐದು ಕೋಟಿ ನಿರುದ್ಯೋಗ ಪ್ರಮಾಣ ಹೆಚ್ಚಿದೆ. ಸ್ವಾಮಿನಾಥನ್ ಸಮಿತಿಯ ವರದಿಯಂತೆ ರೈತರಿಗೆ ಬೆಂಬಲ ಬೆಲೆ ಕೊಡುತ್ತೇವೆಂಬುದು ಹುಸಿಯಾಗಿದೆ. ಒಟ್ಟಾರೆ ಬಡವರ ಜೀವನ ದುಸ್ಥಿತಿ ತಲುಪಿದೆ. ಬಡವರು ಬಹಳ ಕಷ್ಟದ ಜೀವನ ಸಾಗಿಸುತ್ತಿದ್ದಾರೆ.
ಹಾಗಾಗಿ ಬಿಜೆಪಿ ಪಕ್ಷವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕಾದುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಏಕೆಂದರೆ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬುಡಮೇಲು ಮಾಡುವ ಹುನ್ನಾರ ಅವರಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಕರ್ನಾಟಕ ಗ್ರಾಮ ಪಂಚಾಯಿತಿ ಮಹಾ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ ಮತ್ತು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ ಮಲ್ಲಿಕ್ ಭೀಮನ ಬಿಡು ಕಾಂಗ್ರೆಸ್ ಮುಖಂಡರು ಶಂಕರ್ ಗುಂಡ್ಲುಪೇಟೆ ಕಾಂಗ್ರೆಸ್ ಮುಖಂಡರು,
ಅಬ್ದುಲ್ ಮಾಲಿಕ್ ಕಾವಲು ಪಡೆಯ ತಾಲೂಕು ಅಧ್ಯಕ್ಷರು ಮತ್ತು ಸಾಧಿಕ್ ಪಾಷ ಕಾವಲು ಪಡೆಯ ಉಪಾಧ್ಯಕ್ಷರು ಹಾಗೂ ಮಹದೇವ ಚಿಜಲ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಚಿನ್ನಸ್ವಾಮಿ, ಮಿಮಿಕ್ರಿ ರಾಜು ಮತ್ತು ರಾಜು ಹೊಸಮನೆ ಸಿದ್ದು ವೀರನಪುರ ಹನುಮಂತರಾಜು ಕಾಂಗ್ರೆಸ್ ಮುಖಂಡರು ಹೊನ್ನೇಗೌಡನಹಳ್ಳಿ ಪರಮೇಶ್ ದಸಂಸ ಮುಖಂಡರು ರಜಿನಿ ಹಂಗಳ ಇನ್ನೂ ಇತರರು ಉಪಸ್ಥಿತರಿದ್ದರು.