ಕನ್ನಡದ ಖ್ಯಾತ ಹಿರಿತೆರೆ ಮತ್ತು ಕಿರುತೆರೆ ಕಲಾವಿದೆ ರಶ್ಮಿ ಹರಿಪ್ರಸಾದ್ ಶೂಸ್ಟನ್ ನಗರದ ಶ್ರೀ ಕೃಷ್ಣ ಬೃಂದಾವನ ದೇವಸ್ಥಾನದಲ್ಲಿ ಭಾರತೀಯ ಸಂಸ್ಕöÈತಿ ಸಾರುವ ನೃತ್ಯ ಪ್ರದರ್ಶನ ಪ್ರಸ್ತುತಪಡಿಸಿದರು. ಆರಂಭದಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿದ ಬಳಿಕ ತಮ್ಮ ಗುರು ರಾಧಾ ಶ್ರೀಧರ್ ಅವರ ಪುತ್ರಿ ಇಂದಿರಾ ಪಾರ್ಥಸಾರಥಿ ಅವರೊಡನೆ ರಾಮ ಶಾಮ ಪ್ರಸ್ತುತಪಡಿಸಿದರು. ಕನ್ನಡದ ಖ್ಯಾತ ಕಲಾವಿದೆಗೆ ಅಲ್ಲಿನ ನಾಗರೀಕರಿಂದ ಕಲಾ ರಸಿಕರಿಂದ ಸನ್ಮಾನ ದೇವಸ್ಥಾನದ ಸ್ಮರಣ ಸಂಚಿಕೆ ಬಿಡುಗಡೆ ಮಾಡುವ ಗೌರವ ಸಿಕ್ಕಿದ್ದು ಅವಿಸ್ಮರಣೀಯ ಕ್ಷಣ ಎಂದು ರಶ್ಮಿ ಹರಿಪ್ರಸಾದ್ ಹೇಳಿದ್ದಾರೆ



