ಚಿತ್ರದುರ್ಗ: ದರ್ಶನ್ರಿಂದ ಕ್ರೂರವಾಗಿ ಹತ್ಯೆಯಾಗಿದ್ದಾರೆ ಎನ್ನಲಾಗಿರುವ ರೇಣುಕಾ ಸ್ವಾಮಿ ಕುಟುಂಬದ ಸದಸ್ಯರು ದರ್ಶನ್ ಚಿತ್ರ ನಿಷೇಧಿಸುವಂತೆ ಆಗ್ರಹಿಸಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಮಾತನಾಡಿ, ದರ್ಶನ್ಗೆ ಇಂತ ನೀಚ, ಕೆಟ್ಟ ಬುದ್ದಿ ಯಾಕೆ ಬಂತು? ಅವನಿಗೂ ತಕ್ಕ ಶಿಕ್ಷೆಯಾಗಬೇಕು, ನನ್ನ ಮಗ ತಪ್ಪು ಮಾಡಿದ್ದರೆ ದೂರು ಕೊಡಬಹುದಿತ್ತು. ಅದು ಬಿಟ್ಟು ಅಪಹರಣ ಮಾಡಿಕ್ರೂರವಾಗಿ ಹಿಂಸಿಸಿ ಕೊಲೆ ಮಾಡಿದ್ದಾರೆ. ಈಗ ಆತನ ಪತ್ನಿಗೆ ಯಾರು ದಿಕ್ಕು ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಂದೆಡೆ ರೇಣುಕಾ ಸ್ವಾಮಿ ತಂದೆ ಶಿವನಗೌಡ ಮಾತನಾಡಿ, ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು,ಇದರಿಂದ ನಿಜಾಂಶ ಹೊರಬರುತ್ತದೆ. ದರ್ಶನ್ ಮತ್ತು ಅವರ ಸಹಚರರಿಗೆ ಕ್ರೂರವಾದ ಶಿಕ್ಷೆಯಾಗಬೇಕು ಎಂದು ಆಗ್ರಹಪಡಿಸಿದ್ದಾರೆ.ರೇಣುಕಾಸ್ವಾಮಿ ಪತ್ನಿ ಸಹನ ಮಾತನಾಡಿ, ನಾನು ಈಗ 5 ತಿಂಗಳ ಗರ್ಭಿಣಿ ನನ್ನ ಮಗುವಿಗೆ ದಿಕ್ಕು ಯಾರು? ಸಾಯುವವರೆಗೂ ನಾನು ಹೇಗೆ ಬದುಕಲಿ ಎಂದು ಕಣ್ಣೀರು ಹಾಕಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.