ನವದೆಹಲಿ: ೭೭ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟಿçÃಯ ಯುದ್ಧ ಸ್ಮಾರಕಕ್ಕೆ ತೆರಳಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಇಂದು ಬೆಳಗ್ಗೆ ಮೋದಿ ಅವರು ರಾಷ್ಟಿçÃಯ ಯುದ್ಧ ಸ್ಮಾರಕಕ್ಕೆ ಬಂದ ಮೋದಿ ಅವರನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬರಮಾಡಿಕೊಂಡರು. ಬಳಿಕ ಮೋದಿ ಅವರು ೨ ನಿಮಿಷ ಮೌನಾಚರಣೆ ಮಾಡಿದರು. ನಂತರ ಪುಷ್ಪಗುಚ್ಛ ಇಡುವ ಮೂಲಕ ಹುತಾತ್ಮರಿಗೆ ನಮನ ಸಲ್ಲಿಸಿದರು. ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮೋದಿ ಮತ್ತು ಇತರ ಗಣ್ಯರು ಮೆರವಣಿಗೆಯನ್ನ ವೀಕ್ಷಿಸಲು ಕರ್ತವ್ಯ ಪಥದಲ್ಲಿನ ವೇದಿಕೆಗೆ ತೆರಳಿದರು.
ಈ ವೇಳೆ ಕರ್ತವ್ಯ ಪಥದ ಪರೇಡ್ ಅಧ್ಯಕ್ಷತೆ ವಹಿಸಿದ್ದ ರಾಷ್ಟçಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯ ಅತಿಥಿಗಳಾಗಿದ್ದ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಹಾಗೂ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರನ್ನ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರೂ ಹಾಜರಿದ್ದರು.
ಗಣ್ಯರ ಸ್ವಾಗತದ ಬಳಿಕ ಪ್ರಧಾನಿಗಳು ಅತಿಥಿಗಳೊಂದಿಗೆ ಮುಖ್ಯವೇದಿಕೆಗೆ ತೆರಳಿದರು. ರಾಷ್ಟçಗೀತೆ ನುಡಿಸಿದ ಬಳಿಕ ಪರೇಡ್ ಶುರುವಾಯಿತು.
ಸಂಪ್ರದಾಯದAತೆ ಪ್ರಧಾನಿ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ರಾಷ್ಟçಪತಿ ದ್ರೌಪದಿ ಮುರ್ಮು ಅವರು ೭೭ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.
ದೇಶೀಯ ಫಿರಂಗಿ ವ್ಯವಸ್ಥೆಯಾದ ೧೦೫ ಎಂಎA ಲೈಟ್ ಫೀಲ್ಡ್ ಗನ್ಗಳಿಂದ ೨೧-ಗನ್ ಸೆಲ್ಯೂಟ್ ಜೊತೆಗೆ ರಾಷ್ಟçಗೀತೆ ನುಡಿಸಲಾಯಿತು. ೧೭೨ ಫೀಲ್ಡ್ ರೆಜಿಮೆಂಟ್ನ ೧೭೨೧ ರ ಸೆರಿಮೋನಿಯಲ್ ಬ್ಯಾಟರಿಯಿಂದ ೨೧-ಗನ್ ಸೆಲ್ಯೂಟ್ ಅನ್ನೂ ಪ್ರಸ್ತುತಪಡಿಸಲಾಯಿತು.
ವಂದೇ ಮಾತರಂ ಗೀತೆ ೧೫೦ ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ವಂದೇ ಮಾತರಂ ಥೀಮ್ನಲ್ಲೇ ಎಲ್ಲ ಕಾರ್ಯಕ್ರಮಗಳು ಈ ಬಾರಿ ನಡೆಯುತ್ತಿವೆ. ಆಪರೇಷನ್ ಸಿಂಧೂರ ಮಿಷನ್ ಪರೇಡ್ನಲ್ಲಿ ಗಮನ ಸಳೆಯಲಿದೆ. ಇದರೊಂದಿಗೆ ದೇಶದ ಅಭೂತಪೂರ್ವ ಅಭಿವೃದ್ಧಿ ಪ್ರಗತಿ, ಬಲವಾದ ಮಿಲಿಟರಿ ಶಕ್ತಿ, ರೋಮಾಂಚನಗೊಳಿಸುವ ಸಾಂಸ್ಕöÈತಿಕ ವೈವಿಧ್ಯತೆ ಇಂದಿನ ಪರೇಡ್ನಲ್ಲಿ ಪ್ರದರ್ಶನಗೊಳ್ಳಲಿದೆ.
ಪ್ರಧಾನಿ ಶುಭಾಶಯ
ನವದೆಹಲಿ: ಇಂದು ಭಾರತ ೭೭ನೇ ಗಣರಾಜ್ಯೋತ್ಸವ ಹಬ್ಬವನ್ನು ಆಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಹೆಮ್ಮೆ ಮತ್ತು ವೈಭವದ ಸಂಕೇತವಾದ ಈ ರಾಷ್ಟಿçÃಯ ಹಬ್ಬ ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ಶುಭಹಾರೈಸಿದ್ದಾರೆ. ಗಣರಾಜ್ಯೋತ್ಸವ ಪ್ರಯುಕ್ತ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಗಣರಾಜ್ಯೋತ್ಸವದಂದು ನಮ್ಮ ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಭಾರತದ ಹೆಮ್ಮೆ ಮತ್ತು ವೈಭವದ ಸಂಕೇತವಾದ ಈ ರಾಷ್ಟಿçÃಯ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ. ವಿಕಸಿತ ಭಾರತಕ್ಕಾಗಿ ಸಂಕಲ್ಪವು ಇನ್ನಷ್ಟು ಬಲಗೊಳ್ಳಲಿ ಎಂಬ ಸಂದೇಶವನ್ನು ನೀಡಿದ್ದಾರೆ.



