ಬೆಂಗಳೂರು: ಬೆಂಗಳೂರಿನ ವಿಜಯನಗರದ ಪ್ರಜ್ಞಾರತ್ನ ಧಾಮದಲ್ಲಿ ೭೭ನೇ ಗಣರಾಜ್ಯೋತ್ಸವದ ಅಂಗವಾಗಿ ತ್ರಿವರ್ಣದ ಹೆಮ್ಮೆಯ ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.
ಸ್ವಾತಂತ್ರ÷್ಯ ಹೋರಾಟಗಾರರಾದ ಸನ್ಮಾನ್ಯ ಬಾಬುರಾವ್ ದೇಶಮಾನ್ಯ ಮತ್ತು ರತ್ನ ದೇಶಮಾನ್ಯ ರವರ ಬದುಕು ದೇಶಕ್ಕಾಗಿ ದೇಶ ಮಾನ್ಯ ಕುಟುಂಬದ ಸ್ಮರಣೆ ತ್ಯಾಗ ಪ್ರಾಮಾಣಿಕ ದೇಶಭಕ್ತಿಗೆ ಸಾಕ್ಷಿ. ವಿಜಯ ಲಕ್ಷಿ÷್ಮ ದೇಶಮಾನ್ಯ ಅವರಿಗೆ ಭಾರತ ಸರ್ಕಾರವು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ. ಜಿ ವೈ ಪದ್ಮ ನಾಗರಾಜು ರವರು ಗಗನದ ಎತ್ತರಕ್ಕೆ ನಮ್ಮೆಲ್ಲರ ಹೆಮ್ಮೆಯ ತ್ರಿವರ್ಣದ ಧ್ವಜವನ್ನು ಶಾಂತಿ, ಅಹಿಂಸೆ, ಸೌಹಾರ್ದತೆ, ಐಕ್ಯತೆ, ಪ್ರೀತಿಯಿಂದ ತುಂಬಿರಲಿ ಎಂದು ಹಾರೈಸುತ್ತಾ ಹೂವಿನ ಮಳೆಗೆರೆದರು.
ಪ್ರಜ್ಞಾರತ್ನ ಧಾಮದಲ್ಲಿ ಗಣರಾಜ್ಯೋತ್ಸವ ಸಂಭ್ರಮ



