ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಭಾವಿ ಹಿಂದುಳಿದ ವರ್ಗಗಳ ನೆಚ್ಚಿನ ನಾಯಕರಾದ ಎಂಟಿಬಿ ನಾಗರಾಜು ರವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಲು ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯದ ವರಿಷ್ಠರಿಗೆ ಮನವಿ ಸಲ್ಲಿಸಿದರು.
ನಗರದ ಜೆಸಿಎನ್ ಕನ್ವೆನ್ಷನ್ ಹಾಲ್ನಲ್ಲಿ ಆಯೋಜಿಸ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ತಾಲ್ಲೂಕು ಹಿಂದುಳಿದ ವರ್ಗಗಳ ಘಟಕದ ಅದ್ಯಕ್ಷ ಆಲಹಳ್ಳಿಚಂದ್ರಶೇಖರ್ 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಹಿಂದುಳಿದ ವರ್ಗಗಳ ದೊಡ್ಡ ಪ್ರಮಾಣದ ಮತದಾರರನ್ನ ಹೊಂದಿರುವ ಕುರುಬ ಸಮುದಾಯದ ಪ್ರಭಾವಿ ರಾಜಕಾರಣಿಯಾದ ಸಂಭಾವ್ಯ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡಬೇಕು, ಸದ್ಯದ ಪರಿಸ್ಥಿತಿಯಲ್ಲಿ ಎಂಟಿಬಿ ನಾಗರಾಜು ಅವರು ಸೂಕ್ತ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಮ್ಮ ಸಮಾಜವು ಎರಡು ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ, ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಹ ಸೇವೆ ಸಲ್ಲಿಸಿದ್ದಾರೆ, ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಹಾಗೂ ಇತರೆ ವರ್ಗಗಳ ನೆಚ್ಚಿನ ನಾಯಕರಾಗಿ ಸಹ ಎಂಟಿಬಿ ನಾಗರಾಜು ಅವರು ತಮ್ಮ ಛಾಪು ಮೂಡಿಸಿಕೊಂಡಿದ್ದಾರೆ. ಎಲ್ಲಾ ವಿಭಾಗಗಳಲ್ಲಿ ಉತ್ತಮವಾದ ಹಿಡಿತ ಹೊಂದಿರುವ ಎಂಟಿಬಿ ರವರಿಗೆ ವರಿಷ್ಠರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡಿದರು.
ನಂತರ ಹೊಸಕೋಟೆ ತಾಲೂಕು ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಕೇಶವ ಮೂರ್ತಿ ಅವರು ಮಸತನಾಡಿ ಎಂಟಿಬಿ ನಾಗರಾಜ್ ರವರು ಶೋಷಿತ ಸಮುದಾಯದ ಜನರಿಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿರುವ ನಾಯಕರು, ಬಡ ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿ ಮೀರಿ ಸಹಾಯ ಮಾಡಲು ಸದಾಕಾಲವೂ ಸಿದ್ದರಿದ್ದಾರೆ,ಎಲ್ಲಾ ವರ್ಗಗಳ ಜನರ ನೆಚ್ಚಿನ ವ್ಯಕ್ತಿಯಾದ ಇವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಆಗ್ರಹಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ತಾಲೂಕಿನ ಕುರುಬ ಸಮುದಾಯದ ನೆಲಮಂಗಲ ತಾಲ್ಲೂಕು ಕನಕ ಪತ್ತಿನ ಸಹಕಾರ ಸಂಘ ಅದ್ಯಕ್ಷ ಲೋಕೇಶ್, ಮಾದಗೊಂಡನಹಳ್ಳಿ ಗ್ರಾ. ಪಂ. ಸದಸ್ಯನಾಗರಾಜ್, ಮಾದಗೊಂಡನಹಳ್ಳಿ ಎಂಪಿಸಿಎಸ್ ನಿರ್ದೇಶಕ ಮಂಜುನಾಥ್, ಹಾಲುಮತ ಮಹಾಸಭಾ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯಾದ್ಯಕ್ಷ ಚೌಡರಾಜ್, ಯಲ್ಲಪ್ಪ, ಕೆಂಪರಾಜು, ಮುನಿ ಬೀರಣ್ಣ, ಲಕ್ಷ್ಮೀಷ, ಬೀರೇಶ್ ಸೇರಿದಂತೆ ತಾಲೂಕಿನ ಪ್ರಮುಖರು ಉಪಸ್ಥಿತರಿದ್ದರು.