ಚಳ್ಳಕೆರೆ: ನಗರಂಗೆರೆ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಯೋಜನೆ ಮತ್ತುಸಂಖ್ಯಕೀಕ ಖಾತೆಮಂತ್ರಿ ಡಿ.ಸುಧಾಕರ್ಗೆ ನಗರಂಗರೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ತಾಲೂಕು ಪಂಚಾಯಿತಿ ಇಲಾಖೆಯು ಗೊಲ್ಲರ ಸಂಘಕ್ಕೆ ನಗರಂಗೆರೆ ಗ್ರಾಮಕ್ಕೆ ಸಂಬಂಧಿಸಿದ.
ರಿ.ಸ.62,63ರ ಜಮೀನು ನಗರಂಗೆರೆ ಗ್ರಾಮದ ರಿ.ಸ.62,63ರಲ್ಲಿ 5ಎಕರೆ ಜಾಮೀನು ಮಂಜೂರಾತಿಗೆ ಶಿಫಾರಸ್ಸು ಮಾಡಿ. ಅಂತಿಮ ಅಂತದ ಪ್ರಕ್ರಿಯೆಯಾದ ಸಾರ್ವಜನಿಕ ಆಕ್ಷೇಪಣಾ ಪತ್ರ ಕೋರಿ. ಸೂಚನಾ ಫಲಕದಲ್ಲಿ ಕೊನೆಯ ದಿನಾಂಕ ನಿಗದಿಪಡಿಸಿದ್ದ ರಿಂದ ಇದನ್ನು ತಡೆಯಲು ಕೋರಿ ಮನವಿ ಪತ್ರ ಸಲ್ಲಿಸಿದರು.
ಈ ಪ್ರಕರಣದ ಹಿನ್ನೆಲೆ ಚಳ್ಳಕೆರೆ ಗೊಲ್ಲರ ಸಂಘಕ್ಕೆ ತಾಲೂಕು ಪಂಚಾಯಿತಿಯ ತಮ್ಮ ಇಲಾಖೆಗೆ ಸೇರಿದ 5 ಎಕರೆ ಜಮೀನುನ್ನು ಮಂಜೂರು ಮಾಡಲು. ಸಾರ್ವಜನಿಕ ಆಕ್ಷೇಪಣೆಯನ್ನು ಕೋರಿದ್ದು. ಈ ಬಗ್ಗೆ ತಾಲ್ಲೂಕು ಪಂಚಾಯತಿ ಕಚೇರಿಯ. ಸೂಚನಾ ಫಲಕದಲ್ಲಿ ಆಕ್ಷೇಪಣೆಗೆ ಕೊನೆಯ ದಿನಾಂಕವನ್ನು ಪ್ರಕಟಿಸಿದ್ದು. ಅದಕ್ಕೆ ಪೂರಕವಾಗಿ ನಗರಂಗೆರೆ ಗ್ರಾಮದ ಗ್ರಾಮಸ್ಥರು. ಜಮೀನು ಮಂಜೂರು ಮಾಡದಂತೆ. ಆಕ್ಷೇಪಣ ಪತ್ರ ಸಲ್ಲಿಸಿದ್ದರು.
ಈ ಹಿಂದೆ 31-05-2023 ರಂದು ನಗರಗೆರೆ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಅನ್ಯ ಖಾಸಗಿ ಉದ್ದೇಶಕ್ಕೆ. ಜಮೀನನ್ನು ಮಂಜೂರು ಮಾಡದಂತೆ ಸಭೆಯಲ್ಲಿ ನಡವಳಿ ಪತ್ರವನ್ನು ಲಗತ್ತಿಸಿ. ಕ್ರಮಕ್ಕೆ ಸಲ್ಲಿಸಿದೆ. ಆದ್ದರಿಂದ ತಾಲೂಕು ಪಂಚಾಯಿತಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇಲಾಖೆಯ ಆಸ್ತಿಯನ್ನು ಖಾಸಗಿ ಸಂಘಗಳ ಪರಭಾರೆ ಮಾಡುತ್ತಿರುವುದು ಎಷ್ಟು ಸೂಕ್ತ. ನಗರಂಗೆರೆ ಗ್ರಾಮವು ಚಳ್ಳಕೆರೆ ನಗರದಿಂದ 4,5 ಕಿ.ಮೀ ಗಳ ಕೂಗಳತೆಯ ದೂರದಲ್ಲಿದ್ದು. ಈ ಗ್ರಾಮದ ಜಮೀನುಗಳು ಅತ್ಯಂತ ದುಬಾರಿ ಬೆಲೆ ಯಾಗಿವೆ.
ಇಂತಹ ಸರ್ಕಾರಿ ಆಸ್ತಿಗಳನ್ನು ಪರಬಾರೆ ಮಾಡಲು ನಾವು ಬಿಡುವುದಿಲ್ಲ ಎಂದು ನಗರಂಗೆರೆ ಗ್ರಾಮಸ್ಥರು. ಸಚಿವರಿಗೆ ತಿಳಿಸಿದರು. ಆದ್ದರಿಂದ ದಯಮಾಡಿ ಈ ಅವೈಜ್ಞಾನಿಕ ಮಂಜೂರಾತಿಯನ್ನು ರದ್ದುಪಡಿಸಿ. ಸರ್ಕಾರಿ ಆಸ್ತಿಯನ್ನು ಉಳಿಸಬೇಕೆಂದು. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಸಚಿವರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಂಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ ಕುಮಾರಸ್ವಾಮಿ,ಎಂ.ರಮೇಶ್, ಎಂ.ಇದಾಯಿತ್ ವುಲ್ಲಾ, ಡಿ.ರಾಜು, ಶಿವಲಿಂಗಮ್ಮ, ಲಕ್ಷ್ಮೀದೇವಿ ಶ್ರೀಶೈಲಪ್ಪ, ಗ್ರಾಮದ ಮುಖಂಡರಾದ ತಿಪ್ಪೇರುದ್ರಪ್ಪ (ಕುಬೇರ ಗ್ಯಾಸ್) ಪಿ ಓಬಯ್ಯ ಎನ್.ಡಿ.ಮೈಹಿನ್ ಕುಮಾರ್, ರವಿಕುಮಾರ್, ಲೋಹಿತೇಶ್, ಎನ್.ಡಿ.ತಿಪ್ಪೇರುದ್ರಪ್ಪ, ಶ್ರೀಶೈಲಪ್ಪ, ರಂಗಸ್ವಾಮಿ, ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.