ಬೆಂಗಳೂರು: 2021 ರಲ್ಲಿ ಬೆಂಗಳೂರಿನ ಕೆಲವು ಪೊಲೀಸ್ ಠಾಣೆಗಳಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ದೂರು ದಾಖಲಾಗಿದ ಪ್ರಕರಣಗಳನ್ನು ಹೆಚ್ಚಿನ ತನಿಖೆಗೋಸ್ಕರ ಸಿಸಿಬಿಗೆ ವಾರ್ಗಾವಣೆ ಮಾಡಲಾಗಿತ್ತು.
ತದನಂಥರ ಇನ್ನು ಹೆಚ್ಚಿನ ತನಿಖೆಗೆ ಸಿ ಐ ಡಿ ಗೆ 2023 ಆಗಸ್ಟ್ ತಿಂಗಳಲ್ಲಿ ರಾಜ್ಯ ಸರ್ಕಾರವು ಸಾರ್ವಜನಿಕ ಹಿತ ದೃಷ್ಟಿಯಿಂದ ವರ್ಗಾವಣೆಗೊಳಿಸಲಾಗಿತ್ತು.
ಈ ಸಂಬಂಧ ಸಿಐಡಿಯೂ ತನಿಖೆ ಕೈಗೆತ್ತಿಕೊಂಡು ತಂತ್ರಜ್ಞಾನದ ಮೂಲಕ ಮತ್ತು ಸಾಕ್ಷಿ ಚಿತ್ರದ ಮೂಲಕ ತನಿಖೆ ನಡೆಸಿದ್ದು ಇನ್ನೂ ಹೆಚ್ಚಿನ ಮಾಹಿತಿಯನು ಸಂಗ್ರಹಿಸಲು ಸಿಐಡಿಯು ಸಾರ್ವಜನಿಕರಿಗೆ ಏನಾದರೂ ಕ್ರಿಪ್ಟೋ ಕರೆನ್ಸಿ ಬಗ್ಗೆ ಮಾಹಿತಿ ಇದ್ದಲ್ಲಿ ಗೌಪ್ಯವಾಗಿ ಸಂಗ್ರಹಿಸಿ.
ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು ಅನುಕೂಲವಾಗಲು ಸಾರ್ವಜನಿಕರು ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.