ಬೆಂಗಳೂರು: ಕೆನರಾ ಬ್ಯಾಂಕ್ನ ನಿವೃತ್ತ ಜನರಲ್ ಮ್ಯಾನೇಜರ್ ಎಸ್.ಸಂತಾನಮ್ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಶ್ರೀಯುತರಿಗೆ 70 ವರ್ಷ ವಯಸ್ಸಾಗಿತ್ತು.
1972 ರಲ್ಲಿ ಕೆನರಾ ಬ್ಯಾಂಕ್ ನಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ಶ್ರೀಯುತರು ತಮ್ಮ 40 ವರ್ಷದ ತಮ್ಮ ಸುದೀರ್ಘ ಸೇವಾವಧಿಯಲ್ಲಿ ಬೆಂಗಳೂರು, ಚೆನ್ನೈ, ಮುಂಬೈ ಮುಂತಾದ ನಗರಗಳಲ್ಲಿ ಸೇವೆ ಸಲ್ಲಿಸಿದ್ದರು. ಕೆನರಾ ಬ್ಯಾಂಕ್ ನಲ್ಲಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಚಿವಾಲಯದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದ.
ಶ್ರೀಯುತರು ಖಜಾನೆ ಮತ್ತು ಹಣ ಹೂಡಿಕೆ ವಿಭಾಗದಲ್ಲಿ ನೈಪುಣ್ಯ ಮತ್ತು ಪಾಂಡಿತ್ಯವನ್ನು ಹೊಂದಿದ್ದರು. ಕೆನರಾ ಬ್ಯಾಂಕ್ ಉದ್ಯೋಗಿಗಳ ಕನ್ನಡ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಸಂತಾನಮ್ ರವರು ಹಲವಾರು ವಿನೂತನ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.