ಬೆಂಗಳೂರು: ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ವಶದಲ್ಲಿರುವ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಅವರ ಇಂದು ತಮ್ಮ ಪರ ವಾದ ಮಂಡನೆ ಮಾಡಲಿರುವ ವಕೀಲರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಏವಣ್ಣ ಅವರನ್ನು ವಿಶೇಷ ತನಿಖಾ ತಂಡದ ವಶಕ್ಕೆ ವಿಚಾರಣೆಗಾಗಿ ನೀಡುವ ಸಂದರ್ಭದಲ್ಲಿ ನ್ಯಾಯಾಧೀಶರು ವಕೀಲರ ಭೇಟಿಗೆ ಅವಕಾಶ ನಿಡಲು ಆದೇಶದಲ್ಲಿ ತಿಳಿಸಿದ್ದರು.ಇಂದು ರೇವಣ್ಣ ಪರ ವಕೀಲರು ರೇವಣ್ಣ ಅವರನ್ನು ಭೇಟಿ ಮಾಡಿ ಬಹಳ ಹೊತ್ತಿನಕಾಲ ಸಮಾಲೋಚನೆ ನಡೆಸಿದ್ದಾರೆ. ಎಸ್ಐಟಿ ಅಧಿಕಾರಿಗಳು ತಮ್ಮನ್ನು ವಿಚಾರಣೆ ಕೇಳಿದ ಪ್ರಶ್ನೆಗಳು ರೇವಣ್ಣ ನೀಡಿದ ಉತ್ತರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಸುಮಾರು ಒಂದು ಗಂಟೆ ಕಾಲ ರೇವಣ್ಣ ಅವರೊಂದಿಗೆ ವಕೀಲರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.ಇಂದು ಸಂಜೆಯೊಳಗಾಗಿ ರೇವಣ್ಣರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗುತ್ತಿದೆ.