“ಹೇ ಮನುಜ ಎಷ್ಟು ಮಾಡುತ್ತಿ ನೀ ಅಬ್ಬರ,
ಸತ್ತ ಮೇಲೇಯೂ ನೀನಾಗುವುದಿಲ್ಲ ಭೂಮಿಗೆ ಗೊಬ್ಬರ.”
ಕ್ರಾಂತಿಯಿಂದ ಶಾಂತಿ ನೆಲೆಸುವುದೆ , ಅಥವಾ ಶಾಂತಿಯಿಂದ ಕ್ರಾಂತಿಯಾಗುವುದೆ.
ಪ್ರಶಾಂತವಾಗಿದ್ದ ಮನಸ್ಸಿಗೆ ಕ್ರಾಂತಿಕಾರಕ ವಿಚಾರಗಳು ತುಂಬಿದರೆ ಕ್ರಾಂತಿಯಾಗುತ್ತದೆ.ಆದರೆ, ಕ್ರಾಂತಿಯಿAದ ತುಂಬಿದ ಮನಸ್ಸಿಗೆ ಶಾಂತಿಯುತ ವಿಚಾರಗಳನ್ನು ತುಂಬಲಾಗದು. ಹೀಗಾಗಿ ಇಂದುಮಹಿಳೆ ಮಕ್ಕಳ ಶಾಂತಿ ಹದಗೆಟ್ಟು ಭೂಮಿಯಲ್ಲಿ ಯುದ್ದಗಳಾಗುತ್ತಿದೆ.ನಮ್ಮ ಮನಸ್ಸೇ ಎಲ್ಲದರ ಮೂಲ ಮನಕುಲ್ ಉದ್ದಾರಕ್ಕಾಗಿ ಶಾಂತಿದಾತರ ಜನ್ಮಗಳಾಗಿದ್ದವು.ಈಗ ಕ್ರಾಂತಿಕಾರರಜನ್ಮಗಳಾಗುತ್ತಿವೆ ಎಂದರೆ ಕಲಿಕೆಯೇ ಕ್ರಾಂತಿಯೆಡೆಗೆ ನಡೆದಿದೆ ಎಂದರ್ಥ.
ಅತಿಯಾದರೆ ಗತಿಗೇಡು ಎಂದAತೆ ಅತಿಯಾದ ಶಾಂತಿಯೂ ಸತ್ಯವನ್ನು ತಿಳಿಸದು.ಅತಿಯಾದ ಕ್ರಾಂತಿಯೂ ಸತ್ಯವನ್ನು ತೋರಿಸದು. ಯುದ್ದ ಒಳಗಾದರೆ ಹೊರಗಿನವರನ್ನೂ ಶಾಂತಿಯಿಂದ ಇರಲು ಬಿಡದು, ಹೊರಗಾದರೆ ಒಳಗಿದ್ದವರನ್ನೂ ಸುಮ್ಮನಿರಲು ಬಿಡದು.ಒಟ್ಟಿನಲ್ಲಿ ಎರಡೂ ಕಡೆ ಶಾಂತಿ ಇರಬೇಕೆಂದರೆ ಸತ್ಯದ ಜೊತೆಗೆ ಧರ್ಮ ಇರಬೇಕು. ಕೇವಲ ಸತ್ಯ ತಿಳಿದುಧರ್ಮ ಪ್ರಕಾರ ನಡೆಯದಿದ್ದರೂ ವ್ಯರ್ಥವಾಗುತ್ತದೆ.
ಹಾಗೆಯೇ ಜ್ಞಾನ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖವಾಗಿದೆ. ಒಂದು ಮುಖ ಇನ್ನೊಂದು ಮುಖವನ್ನು ನೋಡದಿದ್ದರೂ ವ್ಯವಹಾರಕ್ಕೆ ಇಳಿದಾಗ ಎರಡೂ ನಡೆಯುತ್ತದೆ. ಆದರೆ ಧರ್ಮದ ಪ್ರಶ್ನೆ ಬಂದಾಗ ವಿರುದ್ದ ದಿಕ್ಕಿನಲ್ಲಿ ಓಡುತ್ತದೆ.ಇದರಿಂದ ಅಂತರಬೆಳೆದು ಅವಾಂತರಗಳು ಸೃಷ್ಟಿ ಆಗುತ್ತಾ ವಿನಾಶದೆಡೆಗೆ ಜಗತ್ತು ಸಾಗುತ್ತದೆ. ಈಗಲೂ ನಡೆದಿರೋದಿಷ್ಟೆ ಮತಗಳ ಅಂತರ ಮತಾಂತರ, ಜಾತಿಗಳ. ಅಂತರ ಜಾತ್ಯಾಂತರ, ಧರ್ಮಗಳ ಅಂತರ ಧರ್ಮಾಂತರ, ಪಕ್ಷಗಳ ಅಂತರ ಪಕ್ಷಾಂತರ, ದೇಶಗಳ ಅಂತರ ದೇಶಾಂತರ ಆಗುತ್ತಾ ದೇಶ ದೇಶಗಳ ನಡುವೆ ವ್ಯವಹಾರದ ಒಪ್ಪಂದ ಆದರೂ ಮನಸ್ಥಿತಿ ಜ್ಞಾನದ ಸ್ಥಿತಿ ಹದಗೆಟ್ಟು ಹೋಗಿ ದ್ವೇಷದ ವಿಷಬೀಜ ಬಿತ್ತುವ ಮಧ್ಯವರ್ತಿಗಳು ತಮ್ಮ ಸ್ವಾರ್ಥ ಕ್ಕಾಗಿ ಅಜ್ಞಾನವನ್ನು ಸೃಷ್ಟಿ ಮಾಡಿಕೊಂಡು ಜೀವಕ್ಕೆ ಬೆಲೆಯೇ ಇಲ್ಲ. ಸಾಮಾನ್ಯರ ಸಾಮಾನ್ಯಜ್ಞಾನ ಹಿಂದುಳಿದು ವಿಜ್ಞಾನ ಆಳುತ್ತಿದೆ.
ಯಾಕೆ ಆಕಾಶ ಪಾತಾಳದ ನಡುವಿರುವ ಭೂಮಿಮೇಲಿರುವ ಸತ್ಯ ತಿಳಿದಿಲ್ಲವೆ , ಭೂಮಿಯನ್ನು ದುರ್ಬಳಕೆ ಮಾಡಿಕೊಂಡರೆ ಪ್ರಗತಿಯೆ , ಯಾರನ್ನು ಯಾರು ಆಳುತ್ತಿರೋದು , ಆಳುತ್ತಿರುವವರಿಗೆ ಜ್ಞಾನವಿದೆಯೆ , ಯಾರಿಗಾಗಿ ಜೀವಿಸಬೇಕು.ಆಧ್ಯಾತ್ಮ ಎಂದರೇನು , ಆತ್ಮಾವಲೋಕನ ಕ್ಕೆ ರಾಜಕೀಯ ಬೇಕೆ, ಹಿಂದಿನ ಯುದ್ದಗಳಿಂದಾದ ಸಾವುನೋವಿನಿಂದ ಲಾಭ ಯಾರಿಗೆ ನಷ್ಟ ಯಾರಿಗಾಗಿದೆ. ಪ್ರಕೃತಿವಿಕೋಪಕ್ಕೆ ಕಾರಣವೇನು , ಭಾರತೀಯರು ಭಾರತೀಯತೆಯೊಳಗಿರುವರೆ , ದೇಶದಿಂದ ಹೊರಹೋದವರ ಜೀವಕ್ಕೆ ಬೆಲೆಕೊಡುವುದು ಸರಿ ಒಳಗಿದ್ದವರ ಜೀವಕ್ಕೆ ಬೆಲೆಯಿಲ್ಲವೆ , ಸತ್ಯವೇ ದೇವರೆನ್ನುವುದಾದರೆ ನಮ್ಮಲ್ಲಿ ಸತ್ಯ ಇದೆಯೆ , ದೈವತ್ವದೆಡೆಗೆ ಹೋಗಿರುವ ಮಹಾತ್ಮರನ್ನು ಇಂದು ಮಧ್ಯೆ ನಿಲ್ಲಿಸಿ ವ್ಯಾಪಾರಕ್ಕೆ ಬಳಸಿದರೆ ತತ್ವ ಬೆಳೆಯುವುದೆ.
ತತ್ವಜ್ಞಾನ ದಿಂದ ಆಧ್ಯಾತ್ಮ ಪ್ರಗತಿಯಾದರೆ ತಂತ್ರದಿAದ ಭೌತಿಕಾಸಕ್ತಿ ಇವೆರಡರ ನಡುವಿರುವ ಸಾಮಾನ್ಯ ಜ್ಞಾನದ ಸದ್ಬಳಕೆಯಾದರೆ ಸಂಸಾರದಲ್ಲಿ ಸಮಾನತೆ, ಸಾಮರಸ್ತ, ಸುಖ ಶಾಂತಿ ಸಮಾಧಾನ ಇರಲು ಸಾಧ್ಯ. ಹಾಗಾದರೆ ಇದು ಹೊರಗಿದೆಯೋ ಒಳಗಿದೆಯೋ , ಹೊರಗಿನವರನ್ನು ಒಳಗೆ ಸೇರಿಸಿಕೊಂಡು ಒಳಗಿದ್ದವರನ್ನು ಹೊರಗೋಡಿಸಿದರೆ ಮೂಲ ಸುಮ್ಮನಿರುವುದೆ , ಇದರಲ್ಲಿನ ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಾಮಾನ್ಯ ಜ್ಞಾನವಿರಬೇಕಷ್ಟೆ.ಮೊದಲು ಮಾನವನಾದರೆ ಮಹಾತ್ಮರನ್ನು ಅರಿಯಬಹುದು. ಮನುಷ್ಯತ್ವವೇ ಇಲ್ಲದೆ ಮಹಾತ್ಮರಾದೆವೆಂದರೆ ಇದೊಂದು ನಾಟಕವಷ್ಟೆ. ಇಲ್ಲಿ ಯಾರದ್ದೋ ಕರ್ಮಕ್ಕೆ ಯಾರಿಗೋ ಶಿಕ್ಷೆ ನೀಡುವ ರಾಜಕೀಯ ವಿದೆ.ಆದರೆ ಮೇಲಿನ ನ್ಯಾಯಾಲಯದ ತೀರ್ಪು ಬರೋವಾಗ ಯಾರೂ ರಾಜರಾಗಿರೋದಿಲ್ಲ ಅವರವರ ಕರ್ಮಕ್ಕೆ ತಕ್ಕಂತೆ ಶಿಕ್ಷೆ ಆಗೇ ಆಗುತ್ತದೆ. ತಡೆಯಲು ಹಣವಿದೆ ಎನ್ನುವುದು ಭ್ರಮೆಯಷ್ಟೆ.
ತಾತ್ಕಾಲಿಕ ಸುಖಕ್ಕಾಗಿ ಸಾಲದ ಹಿಂದೆ ಹೋದರೂ ಸಾಲ ತೀರಿಸುವಾಗ ದು:ಖ ತಪ್ಪಿದ್ದಲ್ಲ. ಕಲಿಗಾಲದ ಕಲಿಕೆ ಹೊರಮುಖವಾದಷ್ಟೂ ಅಂತರಗಳು ಬೆಳೆಯುತ್ತಲೇ ಹೋಗಿ ದೇಶಾಂತರ ಹೋಗೋರು ಹೆಚ್ಚು.ಯಾವ ದೇಶಕ್ಕೆ ಹೋದರೂ ಇರೋದೊಂದೆ ಭೂಮಿ.
ಅದರ ಋಣ ತೀರಿಸುವ ಸುಜ್ಞಾನವಿದ್ದರೆ ಶಾಂತಿ ಇರುತ್ತದೆನ್ನುವುದೊಂದೆ ಸತ್ಯ. ಸ್ವಧರ್ಮ, ಸ್ವಾವಲಂಬನೆ, ಸ್ವಾಭಿಮಾನ, ಸತ್ಯ, ಸ್ವತಂತ್ರ ಬುದ್ದಿಜ್ಞಾನ ಹತ್ತಿರವೆ ಇದ್ದರೂ ಗುರುತಿಸಿ ಬೆಳೆಸದ ಶಿಕ್ಷಣ ಕೊಡದೆ ಆಳಿದರೆ ಅಳೋದನ್ನು ತಡೆಯಲಾಗದು.
ಆತ್ಮನಿರ್ಭರತೆ ವ್ಯಾಪಾರಕ್ಕೆ ಸೀಮಿತವಾದರೆ ಹಣ ಸಿಗಬಹುದು. ಅದರಹಿಂದೆ ಋಣವೂ ಇರುತ್ತದೆ. ಇದನ್ನು ತೀರಿಸುವ ಸತ್ಯಜ್ಞಾನದ ಹಿಂದೆ ನಡೆದರೆ ಜೀವಕ್ಕೆ ತೃಪ್ತಿ ಮುಕ್ತಿ ಸಿಗುತ್ತದೆನ್ನುವುದು ಸನಾತನ ಧರ್ಮ. ಈಗ ಹೇಗಿದೆ .
ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆಸುಮ್ಮನೆ. ಸುಮ್ಮನಿದ್ದರೆ ಶಾಂತಿ. ಇರದಿದ್ದರೆ ಕ್ರಾಂತಿ. ಪ್ರಶಾಂತವಾಗಿರುವ ಮಕ್ಕಳ ಮನಸ್ಸನ್ನು ಯೋಗದ ಮೂಲಕ ಸುಸ್ಥಿತಿಯಲ್ಲಿಡೋದು ಪೋಷಕರ ಗುರುಹಿರಿಯರ ಧರ್ಮ ಕರ್ಮ.
ಎತ್ತ ಸಾಗುತ್ತಿದೆ ವಿಜ್ಞಾನ ಜಗತ್ತು
ಆಧ್ಯಾತ್ಮ ವಿಜ್ಞಾನ ಭೌತ ವಿಜ್ಞಾನದ ನಡುವಿನ ಸಾಮಾನ್ಯ ಜ್ಞಾನ ಇಂದು ಅಗತ್ಯವಿದೆ. ಹಣವಿಲ್ಲದೆ ಜೀವನವಿಲ್ಲ ಹಾಗೆ ಸತ್ಯಜ್ಞಾನವಿಲ್ಲದ ಜೀವನ ಜೀವನವೇ ಆಗಿರಲ್ಲ.
-ಭಗವತಿ, ಬೆಂಗಳೂರು



